Dec 29, 2009

ಕರವಪಿಡಿಯಲೇ, ಮಲೆಮಗಳೇ

ಕರವಪಿಡಿಯಲೇ, ಮಲೆಮಗಳೇ
ನಿನ್ನ ಕರವಪಿಡಿಯಲೇ ...//

ಬಾನಿರುಳಿನ ಕಾರ್ಗತ್ತಲಾವರಿಸಿರಲು
ನಡೆವ ದಾರಿಯಾನೀಕಾಣದಿರಲು
ಇರುಳಹಾದಿಯಲಿನೀ ಏಕಾಂಗಿಯಾಗಿರಲು //೧//

ಕರವಪಿಡಿಯಲೇ, ಮಲೆಮಗಳೇ
ನಿನ್ನ ಕರವಪಿಡಿಯಲೇ ...//

ಮನದಂಗಳದ ಮಹಾ ತೋಟದಲಿ
ಮಮತೆಯದಾರೆಯನ್ನೆರೆದು
ನೀಬೇಳೆಸಿದ ಹೂವುಗಾಳಿಯಲಿ ಉದುರಲು //೨//

ಕರವಪಿಡಿಯಲೇ, ಮಲೆಮಗಳೇ
ನಿನ್ನ ಕರವಪಿಡಿಯಲೇ ...//

ರುತುಗಾನದಲಿ ನೀಯಾಲಿಸಿದಗಾನ
ವಸಂತದಾಗಮನದಲಿ ನೀ ಕಳೆದ
ಅರಳದ ಹೂಮೊಗ್ಗುಗಳ ರಾಶಿ ನೀ ನೋಡುತಿರೆ //೩//


ಕರವಪಿಡಿಯಲೇ, ಮಲೆಮಗಳೇ
ನಿನ್ನ ಕರವಪಿಡಿಯಲೇ ...//

Dec 19, 2009

ಪ್ರೀತಿ ಪರಿಶುದ್ದವಾಗಿದೆ.ಎಲ್ಲೊ ಮರೆಯಾಗಲಿಕ್ಕಾಯಿತು
ನಿನ್ನನಿನ್ನೊಮ್ಮೆ ನೋಡಲಿಕ್ಕಿಲ್ಲ ನಾನು
ಒಂದು ಮುಷ್ಟಿ ಸುಂದರ ಕನಸುಗಳು..
ಸುಂದರ ನಿಮಿಷಗಳನ್ನು ನೀಡಿದೆ ನೀ
ನೀ ಅಗಲಿದರೂ ಸಾಯದು ನಿನ್ನ ನೆನಪುಗಳು
ರಾಗಗಳನೇಕವಿದ್ದರೂ ಅನುರಾಗವೆನಗಿಷ್ಟ
ಸುಂದರಿಯರು ಹಲವರಿದ್ದರು ಸಖಿ ನೀ ಸಾಕೆನಗೆ
ಅಗಲಿಕೆ ಪ್ರಕ್ರತಿಯ ಸಂಗೀತವಾಗಿದೆ
ಮರವಿಯ ಪುಣ್ಯ ತೀರದಲಿ
ನೆನಪುಗಳ ಸುಂದರ ತೀರದಲ್ಲಿ..
ಪ್ರಣಯವನ್ನಿರಸಬೇಕಾದರೆ ಆತ್ಮದಲೊಂದು
ಸಂಗೀತ ದಾರೆ ನದಿಯಂತೆ ಹರಿಯುತಿದೆ..
ಇನ್ನೊಂದು ಜನುಮ ಉಗಮಿಸುವ ತನಕ
ಪ್ರೀತಿಯ ತೀರದಲೊಂದು.. ವೇದಿಕೆ..
ನಿನಗಾಗಿ .. ಇನ್ನೊಂದು ಜನುಮದವರೆಗೆ..

Dec 3, 2009

ಓ ಹುಚ್ಚು ಮನವೆ... ಬಿಚ್ಚಿಡಬೆಡ ನಿನ್ನ ಕಿಚ್ಚು ಹಿಡಿಸೊ... ಸುದ್ದಿಗಳು

ಒಮ್ಮೊಮ್ಮೆ ನನಗನಿಸುತದೆ ನಾ ನಡೆವ ದಾರಿಯಲಿ...


ಯಾರದೊ ಹೆಜ್ಜೆ ಗುರುತು ಕಾಣಿಸುತಿದೆ ಎಂದು...


ಇನ್ನೊಮ್ಮೆ ನನಗನಿಸುತಿದೆ..


ನಾ ಗುನುಗುವ ಹಾಡಿಗೆ ಯಾರೊ ತಾಳ ಹಾಕುತಿದೆ ಎಂ


ದು... ಓ ಹುಚ್ಚು ಮನವೆ...


ಬಿಚ್ಚಿಡಬೆಡ ನಿನ್ನ ಕಿಚ್ಚು ಹಿಡಿಸೊ...

ಸುದ್ದಿಗಳು... ಕಾರ್ಗತ್ತಲಿನ ಎಕಾಂತತೆಯಲಿ

... ಕೇಳಿಸೊ.. ಜೀರ್ಜಿಂಬೆಗಳ.. ಹಾಡು

ನನಗೇಕೆ ಹಾಡಲು ಬರುವುದಿಲ್ಲವೆಂದು...

ಇನ್ನೊಮ್ಮೆ ಅನಿಸುತದೆ... ಈ ಕತ್ತಲೆ ಏಕೆ

ಇಸ್ಟೊಂದು ಬಯಾನಕವೆಂದು... ..


ಎಕಾಂತದಲಿ.. ಬಯಸುವುದು ಮನಸು ಸಂಗಾತಿಯನು..

Dec 2, 2009

ಹೂವಾದ ಪ್ರೀತಿ ಮುಳ್ಳಾಗಿದೆಯಾ ಗೆಳತೀ.

ಪಾರಿಜಾತ ಅರಳೊ..ಸಮಯದಲಿ
ನಿನ್ನ ನವಿರು ಗಲ್ಲವೇಕೆ ನಡುಗುತಿದೆ
ಕಂಬನಿಯೆಕೆ ಜಾರುತಿದೆ ಗೆಳತೀ..

ತಂಗಾಳಿ..ಕೂಡ . ಸುಡುತಿದೆಯಾ ನಿನ್ನಾ..
ಹೂವಾದ ಪ್ರೀತಿ ಮುಳ್ಳಾಗಿದೆಯಾ ಗೆಳತೀ..
ವಿರಗಾಯನದ ಸುಳಿಯಲಿ ರಾಗವಿಲ್ಲದೆ ಹಾಡುತಿದೆಯಾ

ತುಂತುರು ಹನಿಯ ಅಮ್ರುತಸ್ಪರ್ಶದಲಿ ಮರುಗುವೆಯಾ
ನೊವನೆಲ್ಲ ಬದಿಗಿಡೊಮ್ಮೆ ಗೆಳತೀ..ಜೀವನದ ಯಾತ್ರೆಯಲಿ
ಕನಸುಗಳ ಮೂಟೆಯನು ಕಟ್ಟಿರು ಗೆಳತೀ..

ದಾರಿಬೇರೆಯಾದರೂ ಗುರಿ ಒಂದೆ ಅಲ್ಲವೇ ಗೆಳೆಯಾ

ದಾರಿ ಬೇರೆಯಾದರೇನು..ಪ್ರೀತಿ ಉಳಿಯಲಿ
ನಾ ಎಲ್ಲೆ ಇದ್ದರು ನೀ ಹೇಗೇಇದ್ದರೂ...

ನಾ ಎಲ್ಲೆ ಇರಲಿ..ಹೇಗೇ..ಇರಲಿ...
ಮರೆಯದಿರು ಎನ್ನಾ.. ನೀ...
ನೀ ಎನ್ನ ಮರೆತರೆ ಸಾವು ನನಗೆ

ಮಿಡಿಯೊ ಎದೆಯಲಿ ಅರಳಲಿ ದಿನವೂ
ಸಾವಿರಾರು ಜಾಜಿ ಮಲ್ಲಿಗೆಗಳು..
ಅದರ ಕಂಪಲಿ..ಮರೆತು ಬಿಡು.. ನೊವನ್ನು..

ದಳವುದುರುವಂತೆ..ಮಳೆಹನಿಗಳು..
ನೆಲವನಪ್ಪುತಿದೆ ನೊವಿನಲ್ಲಿ...
ಒ ಇನಿಯಾ ನಾ ಒಮ್ಮೆ ಬರಲೆ...

ದಾರಿಬೇರೆಯಾದರೂ ಗುರಿ ಒಂದೆ ಅಲ್ಲವೇ ಗೆಳೆಯಾ
ಮಿಡಿಯುತಿರಲಿ. ಮೌನವೀಣೆ.. ದಿನವೂ
ಕೆಲಿಸದಿರದು ಅದರ ಪ್ರತಿಪಲನವೆನಗೆ...

ನಿನ್ನೆಯಲ್ಲರಳಿದ..ಹೂಗಳಿಂದು.. ಬಾಡಿದೆ..
ನಮ್ಮ ಪ್ರೇಮ ಬಳ್ಳಿಯಲ್ಲರಳಿದ... ಕುಸುಮ
ಬಾಡದೆ ಕಾಪಡಿಕೊ ಗೆಳೆಯಾ

Dec 1, 2009

ಕರಳಕುಡಿ.


ನೀ ಎನ್ನ ಮರೆತರೂ.. ನೀ ಎನ್ನ ತೊರೆದರೂ
ನಾ ನಿನ್ನ ಬಿಡಲಾರೆ... ಮಗನೆ... ನೀನೆನ್ನ ಕೂಸು

ನಿನ್ನ ಹೊತ್ತು ಹೆತ್ತು ಬೆಳೆಸಿದ ತಪ್ಪಿಗೇನಾ ಈ ವೆದನೆ...
ಬಾಳಸಂಜೆಯಲಿ ಸಂಗಾತೀಯೂ ದೂರಾದ ಮೇಲೇ...

ನಿನ್ನ ಕಿಲಕಿಲ ನಗುವಲಿ ಮರೆತೆ ನಾ ಲೊಕವಾ..
ನಿನ್ನ ತೊದಲು ನುಡಿಯಲಿ ಮರೆತೆ ನಾ ಜಗವಾ

ಕತ್ತಲೆ ತುಂಬಿದ ನಮ್ಮ ಜೀವನದಲಿ ಬಂದೆ ನೀ
ಪುಟ್ಟ ಮಿನುಗು ದೀಪವಾಗಿ.. ಎಲ್ಲರ ಮನ ಬೆಳಗಿಸಿದೆ

ಬತ್ತಿಯ ಜ್ಯೊತಿ ಆರದಂತೆ ಕಾದರೂ ಮನದ ಜ್ಯೊತಿ ಆರಿತು
ಕತ್ತಲೆಯ ಮನೆಯಲಿ ನೂಕಿದೆ ನೀ ಕೊನೆಗೆನಾ..


ಮಗನೆ... ನೀ ಎನೇ ಅಂದರೂ ನೀ ಎನೇ ಮಾಡಿದರೂ...
ನೀ ಎನ್ನ ಕರಳಕುಡಿ..