Dec 29, 2009

ಕರವಪಿಡಿಯಲೇ, ಮಲೆಮಗಳೇ

ಕರವಪಿಡಿಯಲೇ, ಮಲೆಮಗಳೇ
ನಿನ್ನ ಕರವಪಿಡಿಯಲೇ ...//

ಬಾನಿರುಳಿನ ಕಾರ್ಗತ್ತಲಾವರಿಸಿರಲು
ನಡೆವ ದಾರಿಯಾನೀಕಾಣದಿರಲು
ಇರುಳಹಾದಿಯಲಿನೀ ಏಕಾಂಗಿಯಾಗಿರಲು //೧//

ಕರವಪಿಡಿಯಲೇ, ಮಲೆಮಗಳೇ
ನಿನ್ನ ಕರವಪಿಡಿಯಲೇ ...//

ಮನದಂಗಳದ ಮಹಾ ತೋಟದಲಿ
ಮಮತೆಯದಾರೆಯನ್ನೆರೆದು
ನೀಬೇಳೆಸಿದ ಹೂವುಗಾಳಿಯಲಿ ಉದುರಲು //೨//

ಕರವಪಿಡಿಯಲೇ, ಮಲೆಮಗಳೇ
ನಿನ್ನ ಕರವಪಿಡಿಯಲೇ ...//

ರುತುಗಾನದಲಿ ನೀಯಾಲಿಸಿದಗಾನ
ವಸಂತದಾಗಮನದಲಿ ನೀ ಕಳೆದ
ಅರಳದ ಹೂಮೊಗ್ಗುಗಳ ರಾಶಿ ನೀ ನೋಡುತಿರೆ //೩//


ಕರವಪಿಡಿಯಲೇ, ಮಲೆಮಗಳೇ
ನಿನ್ನ ಕರವಪಿಡಿಯಲೇ ...//

No comments:

Post a Comment