Dec 17, 2010

ಮತ್ತೆ ಮತ್ತೆ ಸದ್ದು ಮಾಡಿ ಕಾಡುತಿದೆ ನಿನ್ನ ಕಾಲ್ಗೆಜ್ಜೆ

ಬಿಟ್ಟೆನೆಂದರೂ ಬಿಡದ ಮಾಯೆ ,
ಮರೆತೆನೆಂದರೂ ಮರೆಯಲಾಗದ ನೆನಪೇ ! 
ಎಲ್ಲವನ್ನು ಬಿಟ್ಟು ದೂರ ಹೋಗಿ ಬಿಡು ಗೆಳತಿ ನನ್ನ ಕಣ್ಣಳತೆಗೆ ಸಿಗಲಾರದಷ್ಟು ದೂರ ! 
ಮತ್ತೆ ಎಲ್ಲಿಯಾದರೂ ನೀ ಎದುರಿಗೆ ಸಿಕ್ಕಾಗ ಮತ್ತೆ ಮತ್ತೆ ಆಗಬಾರದು ನನ್ನ ಹೃದಯ ಭಾರ !
ಒಲವ ನೆನಪ ಅಳಿಸುವತ್ತ ಇಟ್ಟಿದ್ದೇನೆ ಒಂದು ಹೆಜ್ಜೆ !
ಮತ್ತೆ ಮತ್ತೆ ಸದ್ದು ಮಾಡಿ ಕಾಡುತಿದೆ ನಿನ್ನ ಕಾಲ್ಗೆಜ್ಜೆ

Aug 19, 2010

ಗೆಳತೀ..

ಇರುಳಿನ ಮಹಾ ನಿದ್ರೆಯಿಂದ ಎಬ್ಬಿಸಿ
ವರ್ಣದ ಗರಿ ನೀಡಿದೆ ನೀ..ನನ್ನ ರಕ್ಕೆಗಳಿಗೆ
ಹಾರಲೊಂದು ನೀಲಾಕಾಶವನ್ನೂ, ನಿನ್ನಾತ್ಮದ
ಶಿಕರದಲೊಂದು ಗೂಡನ್ನೂ ನೀಡಿದೆ
ನೀಹೂಮೊಗ್ಗಿನಲೂ, ತಂಗಾಳಿಯಲೂ ಎಲ್ಲೆಲ್ಲೂ
ನಿನ್ನ ಪರಿಮಳಜೀವರಸ ಬರಡಾಗುತಿರಲು
ಒಂದು ಪ್ರೆಮ ಬಿಂದು ಹಸಿರಾಗಿ ಕಾದೆ
ನೀಕರುಣೆಯ ನೀಲಾಕಾಶದಲೊಂದು
ಬಾನಕ್ಕಿಯಾಗಿ ತೇಲಿ ಹೋದೆ
ನೀಮರಿ ಗುಬ್ಬಿಯೊಂದಳಲು,
ಮಂಜೊಂದುದರಲು. ಕಣ್ಣಹನಿಯೊಂದು
ಜಾರಲುಮನದಲೊಂದು ಮಮತೆಯ
ಕೋಟೆಯನ್ನೆ ಕಟ್ಟಿಸಿ ನೀ ಮರೆಯಾದೆ
ನಿನ್ನ ಹ್ರದಯದಲೆನ್ನ ಹ್ರದಯ ಬೆಸೆದಿರುವೆ
ನಿನ್ನಲಬಯವಾ . ಹುಡುಕುವೆ.
ಅಗಲಲೆನಗಾಗುತ್ತಿಲ್ಲಾ.....
ಬೇಡವೆನಗೆ,
ನಿನ್ನಾತ್ಮದಲೊಂದು ಮಂಜಿನ
ಹನಿಯಾಗಿ ನಿನ್ನ
ನೆನಪಲಿಕರಗಿ ನಿನ್ನ ಉಸಿರಿನಲೆ
ನನ್ನಾತ್ಮವನ್ನು ಮುಗಿಸುವೆ ನನ್ನ ಗೆಳತೀ..

Jul 22, 2010


ಪ್ರೀತಿ ಸ್ನೇಹಗಳು

ಒಡಲಲಿರಲುಪ್ರೀತಿಸುವ ಹೃದಯ

ಜೊತೆಯಲಿರಲುಪ್ರೀತಿಯ

ಮಾತುಗಳು ಮನಃ ತುಂಬಲುಮತ್ತಾವ

ಸುಕವನು ಕೇಳದೀ ಮನಸ್ಸುಸ್ನೇಹವೊಂದಿದ್ದರೆ

ಮತ್ತಾವ ಬಳಗ ಬೇಡಪ್ರೀತಿಯೊಂದಿದ್ದರೆ

ಬೇರಾವ ಹೃದಯವೂ ಬೇಡನೆಮ್ಮದಿಯೊಂದಿದ್ದರೆ

ಮತ್ತಾವ ಸಿರಿಯೂ ಬೇಡಪ್ರೀತಿ ತುಂಬಿದ

ಬದುಕೊಂದಿದ್ದರೆಮತ್ತೇನನ್ನು ಬೇಡದೀ

ಮನಸ್ಸುಸ್ವಾರ್ಥವಿಲ್ಲದ

ಪ್ರೀತಿಮನಸ್ಸನರಿಯುವ

ಸಂಗಾತಿಸ್ನೇಹ ಆತ್ಮೀಯತೆ ತುಂಬಿದ

ಹೃದಯವಿದ್ದರೆಸಂತೋಷದ ಹೂಮಳೆ ಸುರಿದಂತೆ

Jul 3, 2010ಬರಬಾರದಾಗಿತ್ತು ಬಂದೆ

ನೀನನ್ನ ಈ ಬಾಳಲ್ಲಿ..,

ನಿನಗಿಂತ ಚಂದದ ಬಿಂಬ ಮೂಡಲಿಲ್ಲನನ್ನ ಈ ಕಣ್ಣಲ್ಲಿ..,

ಸಿಕ್ಕರೆ ನೀನೆ ಸಿಗಬೇಕು ಎಂದು ಬೇಡಿದೆಆ ದೇವರಲ್ಲಿ..,

ನಿನಗೂ ಮೊದಲೇ ನಾ ಹೋಗಿ ಸ್ವಾಗತಿಸುವೆಆ ಸ್ವರ್ಗದ ಬಾಗಿಲಲ್ಲಿ.....

ನಿನ್ನದೇ ಹೆಸರುಈ ನಿನ್ನ ನೆನಪುಗಳುಮನದ ಹಾಳೆಯ

ತುಂಬಾ ನೀನಿಟ್ಟ ಹೆಜ್ಜೆಯ

ಗುರುತುತೊರೆದು ಹೋಗದಿರು

ನನ್ನ ನೀ ಮರೆತುನಾನೇನನೂ

ಅರಿಯೆ ನಿನ್ನ ಪ್ರೀತಿಯ ಹೊರೆತುಬಾಳು

ನನ್ನೊಂದಿಗೆ ನನ್ನ ಪ್ರೀತಿಯ

ಅರಿತುಪುಟದ ತುಂಬೆಲ್ಲ ಕೇವಲ

ನಿನ್ನದೇ ಹೆಸರುಈ ನಿನ್ನ ನೆನಪುಗಳು

ಸದಾ ಹಚ್ಚ ಹಸಿರುಯಾವುದ ಮರೆತರೂ

ಮರೆಯಲಾಗುವುದೇ ಉಸಿರುಹಸಿರು

ಉಸಿರಾಗಿ ನೀ ಎಂದೂ ನನ್ನ ಜೊತೆಯಿರು

Jun 28, 2010

ಒಳಗಡೆ ಹೇಗೆ ಅವಿತು ಕುಳಿತೆನನ್ನ ಮನ ನುಡಿಯುತಿದೆ ಒಲವ ಕವಿತೆನೀ ನನ್ನ ಮದುರ ಮನದ ಜೀವ ಲತೆಏನೆಂದು ಬಣ್ಣಿಸಲಿ ಹೇಳೇ ನನ್ನ ಹೃದಯ ದೇವತೆ !ಮುದ್ದಾದ ಮನದಲಿ ಮಧುರ ಕನಸ ಕಟ್ಟಿ ನಿನ್ನನೇ ಆರಾದಿಸುತ್ತಿದ್ದೆ !ನನ್ನ ಕಂಗಳಲಿ ನಿನ್ನದೇ ಪ್ರತಿರೂಪ ತುಂಬಿ ನನ್ನ ನಿದ್ದೆಯನೆ ಕದ್ದಿದ್ದೆಕಂಡ ಕ್ಷಣದಲೇ ನನ್ನ ಹೃದಯದಲಿ ನೀ ಮನೆಯ ಮಾಡಿದ್ದೆಕಾಣದಾದಾಗ ನೀ ನಾ ಚಡಪಡಿಸಿ ಚಿಂತೆಗೆ ಬಿದ್ದಿದ್ದೆಮನಸು ಬಯಸಿದ ಒಲವ ಪೂಜಿತೆಯು ನೀನು ಗೆಳತಿಕಣ್ಣ ಕಣ್ಣಂಚಲಿ ತುಂಬಿದೆ ನಿನ್ನದೇ ರೂಪವದು ಒಡತಿಏನ ಹೇಳಲಿ ಏನೆಂದು ಬರೆಯಲೇ ಹೇಳೇ ನನ್ನೊಲವ ಪ್ರೀತಿಜೊತೆ ನೀನಿದ್ದರೆ ಜೀವನದಲಿ ಏನಾದರೂ ಎದುರಿಸುವೇನು ಗೆಳತಿ

ಪ್ರೀತಿಯ ಅಂಬಾರಿ
ನಾ ಬರೆದ ಕವಿತೆಗಳು ನನ್ನ


ಕವಿತೆಗಳಲ್ಲಒಂಟಿಯಾಗಿದ್ದ ಹೃದಯ ಹೇಳಿದ ಮಧುರ


ಮಾತುಗಳುಎಲ್ಲ ಪ್ರೇಮಗೀತೆಗಳಲ್ಲಿ ಇದ್ದಳು


ಕನಸಿನ ಚೆಲುವೆವಿರಹದ ಹಾಡುಗಳಲ್ಲಿ ತುಂಬಿಹೋಗಿದೆ


ಅವಳಿಲ್ಲದ ನೋವೆಸ್ನೇಹದಿಂದ


ಪುಟಿದೇಳುವ ಪ್ರೀತಿ ಕಾರಂಜಿಬೆಚ್ಚನೆಯ ಬಾಹುಗಳಲಿ


ಆಗುವುದು ಪ್ರೀತಿ ಬಂದಿನನ್ನ ಹೃದಯ


ವೀಣೆ ಮೀಟುವ ಬೆರಳು ನಿನ್ನದುನಿನ್ನ ಜೊತೆಯಲ್ಲಿ


ಜೀವಮಾನ ಕಳೆಯುವ ಆಸೆ ನನ್ನದುಇನ್ನು


ಎಷ್ಟು ಕವಿತೆ ಬರೆಯುವುದು ಉಳಿದು ಹೋಗಿದೆಯೋಇನ್ನು


ಎಷ್ಟು ದಿನ ಅವಳಿಗಾಗಿ ನಾ ಕಾಯಬೇಕಿದೆಯೋಎಷ್ಟು


ದೂರ ಕ್ರಮಿಸಿದರು ಮುಗಿಯದು ದಾರಿನೀನಿಲ್ಲದೆ


ಹೇಗೆ ಸಾಗುವುದು ಪ್ರೀತಿಯ ಅಂಬಾರಿ

ಬದುಕು
ಬದುಕು ಒಂದು ನಿರಂತರ ಪಯಣ, ಬದುಕಿನ ದಾರಿಯಲ್ಲಿ ನೋವು ನಲಿವು ಎಲ್ಲ ಇದ್ದುದ್ಡೇ, ಬದುಕಿನ ದಾರಿ ಪಯಣಿಸುವಾಗ ಬೇರೆ ಬೇರೆ ತರಹದ ಸನ್ನಿವೇಶಗಳು ಸಂಧರ್ಭಗಳೂ ನಮ್ಮ ಹೃದಯವನ್ನೂ ತಟ್ಟುತ್ತವೆ........... ನನ್ನ ಬಗ್ಗೆ ನಾನೇ ತಿಳಿದು ಕೊಳ್ಳುವ ಪ್ರಯತ್ನ ಮಾಡುತಲಿದ್ದೆನೆ, ಮನುಷ್ಯ ಪ್ರತಿ ಗಳಿಗೇ ಬೇರೆ ಬೇರೆ ತರಹ ಬೇರೆ ಬೇರೆ ಸನ್ನಿವೇಶಗಳಿಗೇ ಸ್ಪಂದಿಸುತ್ತಾನೆ. ನಾನು ಕೂಡಾ ಹಾಗೆನೆ , ನನ್ನನ್ನು ನಾನು ಪ್ರತಿ ಸನ್ನಿವೇಶದಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತಿದ್ದೇನೆ.

ನಂಬದಿರು ಪ್ರೇಮವ

ನಂಬದಿರು ಪ್ರೇಮವ ಅದು ಉಣಿಸುವುದು ವಿಷವ.....


ಹಾಲಿನಂತೆ ನಿರ್ಮಲವೆಂದು ತಿಳಿಯದಿರು ಪ್ರೇಮವ...


ಅದು ಹಾವಿಗಿಂತಲೂ ಕಾರುವುದು ವಿಷವ....


.ಗುಲಾಬಿ ಹೂವೆಂದು ನಂಬುವರು ಈ ಪ್ರೇಮವ..


.ಮರೆಯದಿರು ಅದೇ ಹೂವಿನಲ್ಲಿರುವ ಮುಳ್ಳು ಈ ಪ್ರೇಮ.....


ಪ್ರೀತಿಗಾಗಿ ಪ್ರಾಣವನ್ನೇ ಕೊಡುವೆನು ಎನ್ನುವರು ಈ ಜಗದಲ್ಲಿ.


.ನಿಜವಾದ ಪ್ರೀತಿ ಬಯಸುವುದು ಸಂತೋಷವ ಸಾವನಲ್ಲ....


ಪ್ರೀತಿಗೆ ಕಣ್ಣಿಲ್ಲವೆಂದು ಬಾವಿಗೆ ಬೀಳುತ್ತಾರೆ ಈ ಜನ...


ನೀ ಮೊದಲು ತಿಳಿ ಪ್ರೀತಿ ಅನ್ನೋದು ಒಂದು ಮಗುವಿನ ಹಾಗೆ


ಅದಕ್ಕೆಬಾಯಿಲ್ಲ ಬರಿ ಅಳುವುದೇ ಹೊರತು ಹೇಳಲು ಮಾತು ಬರುವುದಿಲ್ಲ.......

Mar 31, 2010

ಓ ಮಲ್ಲಿಗೆ ನಿನ್ನೊ೦ದಿಗೆ ನಾನಿಲ್ಲವೆ ಸದಾ ಸದಾ ಸದಾ
ಈ ಕ೦ಗಳು ಮ೦ಜಾದರೆ ನಾ ತಾಳೆನು ಭಯ ಬಿಡು ಸದಾ
ನಿನ್ನ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೇ
ಹೋದೊರೆಲ್ಲ ಒಳ್ಳೆಯವರು, ಹರಸೋ ಹಿರಿಯರೂ
ಅವರ ಸವಿಯ ನೆನಪು ನಾವೆ, ಉಳಿದ ಕಿರಿಯರೂ
ನಿನ್ನ ಕೂಡ ನೆರಳ ಹಾಗೆ, ಇರುವೆ ನಾನು ಎ೦ದು ಹೀಗೆ , ಒ೦ಟಿಯಲ್ಲ ನೀ
ನಾಳೆ ನಮ್ಮ ಮು೦ದೆ ಇಹುದು ದಾರಿ ಕಾಯುತಾ
ದುಃಖ ನೋವು ಎ೦ದೂ ಜೊತೆಗೆ ಇರದು ಶಾಶ್ವತ
ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮು೦ದೆ ಸಾಗಬೇಕು ಧೈರ್ಯ ತಾಳುತಾ

'ಸ್ನೇಹ'

ಜೀವ ಹೋಗುವ ಈ
'ದೇಹ '
ನಾಶವಾಗುವ ಈ
'ಸಂಪತ್ತು'
ಮಾಸಿ ಹೋಗುವಾ ಈ
'ಸೌಂದರ್ಯ '
ಮೂರು ದಿನಗಳ ಈ
ಬಾಳಿನ ಮದ್ಯೆ ನೋಡಿದಾಗ
ಉಳಿಯುವುದೊಂದೇ ಈ ನಮ್ಮ
'ಸ್ನೇಹ'

Mar 16, 2010

ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಎಲ್ಲರೊ೦ದೆ ಎಲ್ಲರೊ೦ದೆ ಎನ್ನುವ
ಹಾಡೊಮ್ಮೆ ಹಾಡಬೇಕು
ಐಕ್ಯವೊ೦ದೆ ಮ೦ತ್ರ
ಐಕ್ಯದಿ೦ದಲೇ ಸ್ವಾತ೦ತ್ರ್ಯ
ಹೌದು ಐಕ್ಯವೊ೦ದೆ ಮ೦ತ್ರ
ಐಕ್ಯದಿ೦ದಲೇ ಸ್ವಾತ೦ತ್ರ್ಯ
ಮೌಡ್ಯ ಮುರಿಯುವ ಬನ್ನಿ
ಮೌಡ್ಯ ಮುರಿಯುವ ಬನ್ನಿ
ಎಲ್ಲರೊ೦ದೆ ಎಲ್ಲರೊ೦ದೆ ಎನ್ನುವ
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹದಿನಾಲ್ಕು ಲೋಕವ
ಸಪ್ತ ಸಾಗರವ
ಹದಿನಾಲ್ಕು ಲೋಕವ
ಸಪ್ತ ಸಾಗರವ
ಗೆಲ್ಲುವ ಶಕ್ತಿಯು ನಮಗು೦ಟು
ಗೆಲ್ಲುವ ಶಕ್ತಿಯು ನಮಗು೦ಟು
ಎಲ್ಲರೊ೦ದೆ ಎಲ್ಲರೊ೦ದೆ ಎನ್ನುವ
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು

Mar 12, 2010

ನಂಬದಿರು ಪ್ರೇಮವ ಅದು ಉಣಿಸುವುದು ವಿಷವ.....


ಹಾಲಿನಂತೆ ನಿರ್ಮಲವೆಂದು ತಿಳಿಯದಿರು ಪ್ರೇಮವ...

ಅದು ಹಾವಿಗಿಂತಲೂ ಕಾರುವುದು ವಿಷವ.....

ಗುಲಾಬಿ ಹೂವೆಂದು ನಂಬುವರು ಈ ಪ್ರೇಮವ...

ಮರೆಯದಿರು ಅದೇ ಹೂವಿನಲ್ಲಿರುವ ಮುಳ್ಳು ಈ ಪ್ರೇಮ.....

ಪ್ರೀತಿಗಾಗಿ ಪ್ರಾಣವನ್ನೇ ಕೊಡುವೆನು ಎನ್ನುವರು ಈ ಜಗದಲ್ಲಿ..

ನಿಜವಾದ ಪ್ರೀತಿ ಬಯಸುವುದು ಸಂತೋಷವ ಸಾವನಲ್ಲ....

ಪ್ರೀತಿಗೆ ಕಣ್ಣಿಲ್ಲವೆಂದು ಬಾವಿಗೆ ಬೀಳುತ್ತಾರೆ ಈ ಜನ...

ನೀ ಮೊದಲು ತಿಳಿ ಪ್ರೀತಿ ಅನ್ನೋದು ಒಂದು ಮಗುವಿನ ಹಾಗೆ ಅದಕ್ಕೆ

ಬಾಯಿಲ್ಲ ಬರಿ ಅಳುವುದೇ ಹೊರತು ಹೇಳಲು ಮಾತು ಬರುವುದಿಲ್ಲ.......ಬದುಕು ಒಂದು ನಿರಂತರ ಪಯಣ, ಬದುಕಿನ ದಾರಿಯಲ್ಲಿ ನೋವು ನಲಿವು ಎಲ್ಲ ಇದ್ದುದ್ಡೇ, ಬದುಕಿನ ದಾರಿ ಪಯಣಿಸುವಾಗ ಬೇರೆ ಬೇರೆ ತರಹದ ಸನ್ನಿವೇಶಗಳು ಸಂಧರ್ಭಗಳೂ ನಮ್ಮ ಹೃದಯವನ್ನೂ ತಟ್ಟುತ್ತವೆ........... ನನ್ನ ಬಗ್ಗೆ ನಾನೇ ತಿಳಿದು ಕೊಳ್ಳುವ ಪ್ರಯತ್ನ ಮಾಡುತಲಿದ್ದೆನೆ, ಮನುಷ್ಯ ಪ್ರತಿ ಗಳಿಗೇ ಬೇರೆ ಬೇರೆ ತರಹ ಬೇರೆ ಬೇರೆ ಸನ್ನಿವೇಶಗಳಿಗೇ ಸ್ಪಂದಿಸುತ್ತಾನೆ. ನಾನು ಕೂಡಾ ಹಾಗೆನೆ , ನನ್ನನ್ನು ನಾನು ಪ್ರತಿ ಸನ್ನಿವೇಶದಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತಿದ್ದೇನೆ.
ಕಂಡೆ ನಾ..


ಯಾರದೋ ಕಣ್ಣಿನಲ್ಲಿ

ಹಸಿರೆಲೆಯ ಚಿಗುರು,

ಬತ್ತಿ ಹೋದ ಕಡಲಿನಲ್ಲಿ..

ತೇಲಿ ಬರುವ ಬಣ್ಣ ಬಣ್ಣದ ಕನಸು!

ಹೃದಯದ ಮಾಡಿನಲ್ಲಿ..

ಜಾರುವ ಹನಿಗಳ ಹುಸಿ ಮುನಿಸು,

ಹಣತೆಯ ಬಾವಿಯಲ್ಲಿ..

ಮೌನವಾಗಿ ಬಿದ್ದ ಬೆಳಕಿನ ಮನಸ್ಸು

ಸ್ನೇಹದ ಲೋಕದಲಿ ಸ್ನೇಹದ ಬೆಲೆ ಎಂದಿಗೂ ಹೆಚ್ಚು ..


ಮೀಟಲು ಆಗುವುದಿಲ್ಲ ! ಕಲ್ಲಿನ ವೀಣೆಯನು !
ಅರಿಯಲು ಸಾದ್ಯವಿಲ್ಲ ! ಮನಸಿನ ಭಾವನೆಯನು !
ಕಂಡು ಹಿಡಿಯಲು ಆಗುವುದಿಲ್ಲ ! ಮೀನಿನ ಹೆಜ್ಜೆಯನು !
ಹಾಗೆಯೆ ! ಅನುಭವಿಸಬೇಕು ! ಸ್ನೇಹದ ! ಆನಂದವನು !
ವರ್ಣಿಸಲು ಸಾದ್ಯವಿಲ್ಲ ! ಸ್ನೇಹವೆಂದರೆ ಏನೆಂದು !
ಅನುಭವಿಸಬೇಕು ! ಆನಂದಿಸಬೇಕು ! ಕೇಳಬೇಡ ಏಕೆಂದು !
ಕಾಣದ ದೇವರ ನೆನೆದು ! ಅವನ ದಯೆ ಕೋರುವ ಜನ ನಾವು !
ಅರಿಯುವುದಿಲ್ಲ ಏಕೆ ನಿರ್ಮಲ ಸ್ನೇಹದ ನೋವು !
ಭಾವಿಸುವುದಿಲ್ಲ ಏಕೆ ! ಸ್ನೇಹ ಒಂದು ಮದುರ ಸಂಬಂದವೆಂದು !
ಕಟ್ಟುವಿರೆಕೆ ! ಅದಕೂ ! ಸಲ್ಲದ ಕಥೆಗಳನು !
ಬದುಕು ಅಂದರೆ ! ಏನೆಂದು ! ಅರಿಯಬೇಕಿದೆ ನಾವಿಂದು !
ನಗಿಸಲು ಸಾದ್ಯವದಿದ್ದರೂ ಚಿಂತೆಯಿಲ್ಲ ! ಆದರೆ ಸುಮ್ಮನೆ ಅಳಿಸಬೇಡಿ !
ಕಣ್ಣೀರು ಒರೆಸದಿದ್ದರೂ ಪರವಾಗಿಲ್ಲ ! ಆದರೆ ಸುರಿಯುವ ಹಾಗೆ ಮಾಡಬೇಡಿ !
ನಿಮಗೆ ಸ್ನೇಹದಲಿ ನಂಬಿಕೆ ಇರದಿದ್ದರೆ ಚಿಂತೆಯಿಲ್ಲ !
ಆದರೆ ನಂಬಿದವರ ನಂಬಿಕೆಯ ಕೆಡಿಸಬೇಡಿ !
ಜಗದಲಿ ! ಕಣ್ಣಿಲ್ಲದ್ದವರಿಗಿಂತ ! ಕಣ್ಮುಚ್ಚಿ ಕುಳಿತವರೇ ಹೆಚ್ಚ್ಚು !
ಕನಸು ಕಾಣುವವರಿಗಿಂತ ! ಕನಸು ಕಳೆದು ಕೊಂಡ ವರೇ ಹೆಚ್ಚು !
ಸ್ನೇಹದ ಲೋಕದಲಿ ಸ್ನೇಹದ ಬೆಲೆ ಎಂದಿಗೂ ಹೆಚ್ಚು ..

Mar 11, 2010

ನಾನು ಮೀರಾ.., ನೀನಾ ಮಾಧವ....?

ನಾನು ಮೀರಾ..,

ನೀನಾ ಮಾಧವ....?

ಏನಿಲ್ಲದ ನನ್ನೊಳಗೆ

ಪ್ರೀತಿಯ ಪ್ರವಾಹ ಹರಿಸಿದವ

ನೀನಾ ಮಾಧವ.......?

ಏನಲ್ಲದ ಮಾತೊಳಗೆ

ಮಧುರ ಭಾವ ಮೀಟಿದವ

ನೀನಾ ಮಾಧವ.......?

ಹಾಗಿಲ್ಲದ ನನ್ನೊಲವ

ಹಾಗೇ ಇರಬೇಕೆಂದಾದೇಶಿಸಿದವ

ನೀನಾ ಮಾಧವ.......?

ಹಾಗಲ್ಲದ ನನ್ನಂತರಂಗವ

ಹಾಗೆಂದೇ ಶುದ್ಧಿ ಮಾಡಿದವ

ನೀನಾ ಮಾಧವ........?

ಹೌದು , ನೀನೇ ಮಾಧವ

ಅದಕ್ಕೇ ಅಲ್ಲವೆ ನಾನು ಮೀರಾ....?!!

Jan 2, 2010

ನಿದ್ದೆ ಬಾರದ ರಾತ್ರಿ
ಎಷ್ಟೋ ನಿದ್ದೆ ಬಾರದ ರಾತ್ರಿಗಳನ್ನ ನಿನ್ನ ಗುಂಗಿನಲ್ಲೇ ಕಳೆದಿದ್ದಿದೆ.. ಒಮ್ಮೆಯಾದರು ನೀನು ಮಗ್ಗಲು ಬದಲಿಸುವಾಗ ನನ್ನ ನೆನೆದಿದ್ದಿದೆಯ?
ಸಿಹಿ ಇಲ್ಲದ ಜೇನು
ನೂರಾರು ಹಾಡುಂಟು ಕಿವಿಯಿದ್ದು ಕಿವುಡ ! ಜಗ ಬೆಳಗೊ ಬೆಳಕುಂಟು ಕಣ್ಣಿದ್ದು ಕುರುಡ ! ಗೆಳತಿ.. ನೀನಿಲ್ಲದ ನಾನು ಸಿಹಿ ಇಲ್ಲದ ಜೇನು..!
ನೀರಿಲ್ಲದ ಮೀನು
ನೀನಿಲ್ಲದ ನಾನು, ನೀರಿಲ್ಲದ ಮೀನು
ಮೋಹಕ ಕೋಲ್ಮಿಂಚು
ಬಾನಂಚಿನ ಮೋಡದಲ್ಲಿ ಮರೆಯಾದ ಕಣ್ಣೋಟ ತುಟಿಯೆಲೆಯಂಚಿನ ಮುತ್ತಿನಲ್ಲಿ ಕಳೆದು ಹೋದ ಮುಗುಳ್ನಗೆ ಮೋಹಕ ಕೋಲ್ಮಿಂಚಿನೊಂದಿಗೆ ಬರುವುದೇಕೀ ಸಿಡಿಲು? ಮಳೆಯಾಗಿ ಸುರಿದರೂ ಮನದಲ್ಲಿಲ್ಲ ನಿನ್ನ ನೆನಪು ||
ನಿನ್ನದೇ ನೆನಪು
ನಿಮ್ಮ ಸನಿಹದಲ್ಲಿಲ್ಲದ ಪ್ರಿಯತಮ/ಮೆ ನಿಮ್ಮ ಹೃದಯದ ಹತ್ತಿರವಿರುವರೆಂದು ತಿಳಿಸಿ..
ಚಂದ್ರನ ತಂಗಾಳಿ
ಚಂದ್ರನ ತಂಗಾಳಿಗೆ ಹೊಲಿಸಿದ ನಿಮ್ಮ ನಂಬಿಕೆ ಸುಳ್ಳಾಗದಿರಲೆಂದು ಹಾರೈಸಿ
ಚಂದ್ರನ ತಂಗಾಳಿ
ಚಂದ್ರನ ತಂಗಾಳಿಗೆ ಹೊಲಿಸಿದ ನಿಮ್ಮ ನಂಬಿಕೆ ಸುಳ್ಳಾಗದಿರಲೆಂದು ಹಾರೈಸಿ
ಚಂದ್ರನ ತಂಗಾಳಿ
ಚಂದ್ರನ ತಂಗಾಳಿಗೆ ಹೊಲಿಸಿದ ನಿಮ್ಮ ನಂಬಿಕೆ ಸುಳ್ಳಾಗದಿರಲೆಂದು ಹಾರೈಸಿ
ಪ್ರತಿ ಹೆಜ್ಜೆ
ನನ್ನ ಜೊತೆ ನೀನಿರುತ್ತೀಯ ಅಲ್ಲವ? ಪ್ರತಿ ಹೆಜ್ಜೆಯಲ್ಲೂ, ನೋವು ನಲಿವಿನಲ್ಲೂ? ನೀನಿರದ ನೋವು ನೋವಲ್ಲ, ನಲಿವು ನಲಿವಲ್ಲ.
ಪ್ರೀತಿಯ ಗುಟ್ಟು
ಮನ ಮರುಗಿದಾಗಲೆಲ್ಲ ನನ್ನ ಮನ ನಿನ್ನ ಹೆಗಲ ಬೇಡುವುದರ ಗುಟ್ಟೆನು? ಕೂಡಿ ಬೆಳೆಯಲಿಲ್ಲ, ಕೂಡಿ ಬೆರೆಯಲಿಲ್ಲ ಆದರೂ ಅರೆಕ್ಷಣ ನಿನ್ನಗಲಿರಲಾರದ ಮಧುರ ನೊವಿನ ಗುಟ್ಟಾದರೂ ಎನು...?
ನಕ್ಷತ್ರಗಳ ಸಮ್ಮುಖದಲ್ಲಿ
ಈ ನಕ್ಷತ್ರಗಳ ಸಮ್ಮುಖದಲ್ಲಿ ದಿಗ೦ತದ ಅ೦ಚಿನಲ್ಲಿ ನಮ್ಮಿಬ್ಬರ ಹೆಸರ ಬರೆಯುವಾಸೆ....

ನಿಮ್ಮವಳ ಅಂದ
ನಿಮ್ಮವಳ ಅಂದಕ್ಕೆ ನವಿಲು ಕೂಡ ಸಾಟಿಯಾಗಲಾರದೆಂದು ತಿಳಿಸಿ.