Mar 31, 2010

ಓ ಮಲ್ಲಿಗೆ ನಿನ್ನೊ೦ದಿಗೆ ನಾನಿಲ್ಲವೆ ಸದಾ ಸದಾ ಸದಾ
ಈ ಕ೦ಗಳು ಮ೦ಜಾದರೆ ನಾ ತಾಳೆನು ಭಯ ಬಿಡು ಸದಾ
ನಿನ್ನ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೇ
ಹೋದೊರೆಲ್ಲ ಒಳ್ಳೆಯವರು, ಹರಸೋ ಹಿರಿಯರೂ
ಅವರ ಸವಿಯ ನೆನಪು ನಾವೆ, ಉಳಿದ ಕಿರಿಯರೂ
ನಿನ್ನ ಕೂಡ ನೆರಳ ಹಾಗೆ, ಇರುವೆ ನಾನು ಎ೦ದು ಹೀಗೆ , ಒ೦ಟಿಯಲ್ಲ ನೀ
ನಾಳೆ ನಮ್ಮ ಮು೦ದೆ ಇಹುದು ದಾರಿ ಕಾಯುತಾ
ದುಃಖ ನೋವು ಎ೦ದೂ ಜೊತೆಗೆ ಇರದು ಶಾಶ್ವತ
ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮು೦ದೆ ಸಾಗಬೇಕು ಧೈರ್ಯ ತಾಳುತಾ

'ಸ್ನೇಹ'

ಜೀವ ಹೋಗುವ ಈ
'ದೇಹ '
ನಾಶವಾಗುವ ಈ
'ಸಂಪತ್ತು'
ಮಾಸಿ ಹೋಗುವಾ ಈ
'ಸೌಂದರ್ಯ '
ಮೂರು ದಿನಗಳ ಈ
ಬಾಳಿನ ಮದ್ಯೆ ನೋಡಿದಾಗ
ಉಳಿಯುವುದೊಂದೇ ಈ ನಮ್ಮ
'ಸ್ನೇಹ'

Mar 16, 2010

ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಎಲ್ಲರೊ೦ದೆ ಎಲ್ಲರೊ೦ದೆ ಎನ್ನುವ
ಹಾಡೊಮ್ಮೆ ಹಾಡಬೇಕು
ಐಕ್ಯವೊ೦ದೆ ಮ೦ತ್ರ
ಐಕ್ಯದಿ೦ದಲೇ ಸ್ವಾತ೦ತ್ರ್ಯ
ಹೌದು ಐಕ್ಯವೊ೦ದೆ ಮ೦ತ್ರ
ಐಕ್ಯದಿ೦ದಲೇ ಸ್ವಾತ೦ತ್ರ್ಯ
ಮೌಡ್ಯ ಮುರಿಯುವ ಬನ್ನಿ
ಮೌಡ್ಯ ಮುರಿಯುವ ಬನ್ನಿ
ಎಲ್ಲರೊ೦ದೆ ಎಲ್ಲರೊ೦ದೆ ಎನ್ನುವ
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹದಿನಾಲ್ಕು ಲೋಕವ
ಸಪ್ತ ಸಾಗರವ
ಹದಿನಾಲ್ಕು ಲೋಕವ
ಸಪ್ತ ಸಾಗರವ
ಗೆಲ್ಲುವ ಶಕ್ತಿಯು ನಮಗು೦ಟು
ಗೆಲ್ಲುವ ಶಕ್ತಿಯು ನಮಗು೦ಟು
ಎಲ್ಲರೊ೦ದೆ ಎಲ್ಲರೊ೦ದೆ ಎನ್ನುವ
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು

Mar 12, 2010

ನಂಬದಿರು ಪ್ರೇಮವ ಅದು ಉಣಿಸುವುದು ವಿಷವ.....


ಹಾಲಿನಂತೆ ನಿರ್ಮಲವೆಂದು ತಿಳಿಯದಿರು ಪ್ರೇಮವ...

ಅದು ಹಾವಿಗಿಂತಲೂ ಕಾರುವುದು ವಿಷವ.....

ಗುಲಾಬಿ ಹೂವೆಂದು ನಂಬುವರು ಈ ಪ್ರೇಮವ...

ಮರೆಯದಿರು ಅದೇ ಹೂವಿನಲ್ಲಿರುವ ಮುಳ್ಳು ಈ ಪ್ರೇಮ.....

ಪ್ರೀತಿಗಾಗಿ ಪ್ರಾಣವನ್ನೇ ಕೊಡುವೆನು ಎನ್ನುವರು ಈ ಜಗದಲ್ಲಿ..

ನಿಜವಾದ ಪ್ರೀತಿ ಬಯಸುವುದು ಸಂತೋಷವ ಸಾವನಲ್ಲ....

ಪ್ರೀತಿಗೆ ಕಣ್ಣಿಲ್ಲವೆಂದು ಬಾವಿಗೆ ಬೀಳುತ್ತಾರೆ ಈ ಜನ...

ನೀ ಮೊದಲು ತಿಳಿ ಪ್ರೀತಿ ಅನ್ನೋದು ಒಂದು ಮಗುವಿನ ಹಾಗೆ ಅದಕ್ಕೆ

ಬಾಯಿಲ್ಲ ಬರಿ ಅಳುವುದೇ ಹೊರತು ಹೇಳಲು ಮಾತು ಬರುವುದಿಲ್ಲ.......ಬದುಕು ಒಂದು ನಿರಂತರ ಪಯಣ, ಬದುಕಿನ ದಾರಿಯಲ್ಲಿ ನೋವು ನಲಿವು ಎಲ್ಲ ಇದ್ದುದ್ಡೇ, ಬದುಕಿನ ದಾರಿ ಪಯಣಿಸುವಾಗ ಬೇರೆ ಬೇರೆ ತರಹದ ಸನ್ನಿವೇಶಗಳು ಸಂಧರ್ಭಗಳೂ ನಮ್ಮ ಹೃದಯವನ್ನೂ ತಟ್ಟುತ್ತವೆ........... ನನ್ನ ಬಗ್ಗೆ ನಾನೇ ತಿಳಿದು ಕೊಳ್ಳುವ ಪ್ರಯತ್ನ ಮಾಡುತಲಿದ್ದೆನೆ, ಮನುಷ್ಯ ಪ್ರತಿ ಗಳಿಗೇ ಬೇರೆ ಬೇರೆ ತರಹ ಬೇರೆ ಬೇರೆ ಸನ್ನಿವೇಶಗಳಿಗೇ ಸ್ಪಂದಿಸುತ್ತಾನೆ. ನಾನು ಕೂಡಾ ಹಾಗೆನೆ , ನನ್ನನ್ನು ನಾನು ಪ್ರತಿ ಸನ್ನಿವೇಶದಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತಿದ್ದೇನೆ.
ಕಂಡೆ ನಾ..


ಯಾರದೋ ಕಣ್ಣಿನಲ್ಲಿ

ಹಸಿರೆಲೆಯ ಚಿಗುರು,

ಬತ್ತಿ ಹೋದ ಕಡಲಿನಲ್ಲಿ..

ತೇಲಿ ಬರುವ ಬಣ್ಣ ಬಣ್ಣದ ಕನಸು!

ಹೃದಯದ ಮಾಡಿನಲ್ಲಿ..

ಜಾರುವ ಹನಿಗಳ ಹುಸಿ ಮುನಿಸು,

ಹಣತೆಯ ಬಾವಿಯಲ್ಲಿ..

ಮೌನವಾಗಿ ಬಿದ್ದ ಬೆಳಕಿನ ಮನಸ್ಸು

ಸ್ನೇಹದ ಲೋಕದಲಿ ಸ್ನೇಹದ ಬೆಲೆ ಎಂದಿಗೂ ಹೆಚ್ಚು ..


ಮೀಟಲು ಆಗುವುದಿಲ್ಲ ! ಕಲ್ಲಿನ ವೀಣೆಯನು !
ಅರಿಯಲು ಸಾದ್ಯವಿಲ್ಲ ! ಮನಸಿನ ಭಾವನೆಯನು !
ಕಂಡು ಹಿಡಿಯಲು ಆಗುವುದಿಲ್ಲ ! ಮೀನಿನ ಹೆಜ್ಜೆಯನು !
ಹಾಗೆಯೆ ! ಅನುಭವಿಸಬೇಕು ! ಸ್ನೇಹದ ! ಆನಂದವನು !
ವರ್ಣಿಸಲು ಸಾದ್ಯವಿಲ್ಲ ! ಸ್ನೇಹವೆಂದರೆ ಏನೆಂದು !
ಅನುಭವಿಸಬೇಕು ! ಆನಂದಿಸಬೇಕು ! ಕೇಳಬೇಡ ಏಕೆಂದು !
ಕಾಣದ ದೇವರ ನೆನೆದು ! ಅವನ ದಯೆ ಕೋರುವ ಜನ ನಾವು !
ಅರಿಯುವುದಿಲ್ಲ ಏಕೆ ನಿರ್ಮಲ ಸ್ನೇಹದ ನೋವು !
ಭಾವಿಸುವುದಿಲ್ಲ ಏಕೆ ! ಸ್ನೇಹ ಒಂದು ಮದುರ ಸಂಬಂದವೆಂದು !
ಕಟ್ಟುವಿರೆಕೆ ! ಅದಕೂ ! ಸಲ್ಲದ ಕಥೆಗಳನು !
ಬದುಕು ಅಂದರೆ ! ಏನೆಂದು ! ಅರಿಯಬೇಕಿದೆ ನಾವಿಂದು !
ನಗಿಸಲು ಸಾದ್ಯವದಿದ್ದರೂ ಚಿಂತೆಯಿಲ್ಲ ! ಆದರೆ ಸುಮ್ಮನೆ ಅಳಿಸಬೇಡಿ !
ಕಣ್ಣೀರು ಒರೆಸದಿದ್ದರೂ ಪರವಾಗಿಲ್ಲ ! ಆದರೆ ಸುರಿಯುವ ಹಾಗೆ ಮಾಡಬೇಡಿ !
ನಿಮಗೆ ಸ್ನೇಹದಲಿ ನಂಬಿಕೆ ಇರದಿದ್ದರೆ ಚಿಂತೆಯಿಲ್ಲ !
ಆದರೆ ನಂಬಿದವರ ನಂಬಿಕೆಯ ಕೆಡಿಸಬೇಡಿ !
ಜಗದಲಿ ! ಕಣ್ಣಿಲ್ಲದ್ದವರಿಗಿಂತ ! ಕಣ್ಮುಚ್ಚಿ ಕುಳಿತವರೇ ಹೆಚ್ಚ್ಚು !
ಕನಸು ಕಾಣುವವರಿಗಿಂತ ! ಕನಸು ಕಳೆದು ಕೊಂಡ ವರೇ ಹೆಚ್ಚು !
ಸ್ನೇಹದ ಲೋಕದಲಿ ಸ್ನೇಹದ ಬೆಲೆ ಎಂದಿಗೂ ಹೆಚ್ಚು ..

Mar 11, 2010

ನಾನು ಮೀರಾ.., ನೀನಾ ಮಾಧವ....?

ನಾನು ಮೀರಾ..,

ನೀನಾ ಮಾಧವ....?

ಏನಿಲ್ಲದ ನನ್ನೊಳಗೆ

ಪ್ರೀತಿಯ ಪ್ರವಾಹ ಹರಿಸಿದವ

ನೀನಾ ಮಾಧವ.......?

ಏನಲ್ಲದ ಮಾತೊಳಗೆ

ಮಧುರ ಭಾವ ಮೀಟಿದವ

ನೀನಾ ಮಾಧವ.......?

ಹಾಗಿಲ್ಲದ ನನ್ನೊಲವ

ಹಾಗೇ ಇರಬೇಕೆಂದಾದೇಶಿಸಿದವ

ನೀನಾ ಮಾಧವ.......?

ಹಾಗಲ್ಲದ ನನ್ನಂತರಂಗವ

ಹಾಗೆಂದೇ ಶುದ್ಧಿ ಮಾಡಿದವ

ನೀನಾ ಮಾಧವ........?

ಹೌದು , ನೀನೇ ಮಾಧವ

ಅದಕ್ಕೇ ಅಲ್ಲವೆ ನಾನು ಮೀರಾ....?!!