Dec 27, 2012

ಲಿಲ್ಲಿ

ಕಂಗಳಲಿ ಜಿನುಗುವ ನೀರು
ಪ್ರೀತಿಯದೊ ನೊವಿನದೊ ತಿಳಿದಿಲಾ
ಎಲ್ಲವನು ಸಹಿಸುವ ಎಲ್ಲರನ್ನು
ಪ್ರೀತಿಸುವ ನಡೆದಾದುವ ದೇವತೆ
ಕಾರುಣ್ಯದ ದಯಾಮಯಿ ತಾಯಿ
ಸ್ವಾರ್ಥವಿಲ್ಲ , ಆತಂಕವಿಲ್ಲಾ
ಬರುವುದೆಲ್ಲವನು ಸಹಿಸಿವುದು

ಅಲ್ಲಿ

ಮನಸಿಗೆ ತೊಚಿದನ್ನು ಆಡುವ
ಬಾವನೆಗಳಲಿ ಜೀವಿಸುವ
ಪರರ ನೊವಿನಲಿ ಸ್ಪಂದಿಸುವ
ನಿರ್ಮಲವಾದ ಹೂವು

ಗೌರಿ

ನಾಳೆಯ ನಿರೀಕ್ಶೆಯಲಿ
ಇಂದಿನ ದಿನದ ನೊವನ್ನು
ಮರೆಯುವ ಹುಚ್ಚು ಹುಡುಗಿ
ನೂರಾರು ಕನಸುಗಳು
ನನಸಾಗಿದು ಕೆಲವು ಮಾತ್ರ

ಲಲಿತ

 ಸುಕವೇನೆಂದೇ ಅರಿಯದ
ನೊವಿನಲೆ ಹುಟ್ಟಿ.. ಬಡತನದಲಿ
ನರಳಿ ನರಳಿ ಜೀವಿಸುವ
ಕೊನೆಗೆ ಅದರಲೆ ಸಾಯಬೇಕಗಿರುವ
ಪಾರಿಜಾತ ಪುಶ್ಪ

ಜಿಶ

ಯಾರೂ ಅವಳ ಕಣ್ಣನ್ನು
ಸೂಕ್ಶ್ಮವಾಗಿ ಗಮನಿಸಿಲ್ಲಾ
ಯಾರು ಅವಳ ಅಂತರಂದ ಮಾತನ್ನು
ಕೇಳೊ ಹುನ್ನಾರ ಮಾಡಿಲ್ಲಾ
ಎಂದಿಗೂ ಬಾಯಿಬಿಡ ನೂರಾರು
ಆಸೆಗಳು ,ಮಾತುಗಳು
ಮನದಲಡಗಿದೆ

ಮನದರಸಿಪನ್ನೀರು ಬೀಳೋ..ಇ ಬೆಳದಂಗಳಲಿ...
ಪಾರಿಜಾತ ಅರಳೋ..ಸಮಯದಲಿ...
ನಿನ್ನ ಮನದ ಮಣ್ ವೀಣೆ ಮಿಡಿಯಲಿ ನನಗಾಗಿ....

ಚಂದಾಮಾಮನ ಬೊಗಸೆಯಲಿ
ಹಿಡೀಯೊ ಆಸೆಯ ಹುಚ್ಚು ಹುಡುಗೀ..


ತುಂತುರು ಹನಿಯ ಅಮ್ರುತಸ್ಪರ್ಶದಲಿ
ನೆನೆಯೊಣ ಬಾ ಗೆಳೆಯಾ.. ಒಮ್ಮೆ
ನೊವನೆಲ್ಲ ಮರೆಯೊಣ ಬಾ ಮೆಲ್ಲಗೆ...


ಮುಸ್ಸಂಜೆಯ ರಂಗವರ್ಣದೊಕುಳಿಯಲಿ
ಮೀಯೊಣ ಬಾ ಗೆಳೆಯಾ..
ನಿನ್ನ ನೆಪೆನ್ನ ಕಾಡಲು..ಎನ್ನಮನದಲ್ಲಾಗಿತಿದೆ
ಕಾಮನಬಿಲ್ಲಿನ ವರ್ಣ ಚಿತ್ತಾರಾ...ಅದ ನೀ ನೊಡು ಬಾಓ ಮೆಘವೇ... ಮೆಲ್ಲ ಸರಿ ನೀ ನೆನಪುಗಳೊಂದಿಗೆ
ಬರುವಳೀಗೆನ್ನ ಮನದರಸಿ ತುಂತುರು ಮಳೆಹನಿಯಾಗಿ..
ಪ್ರೀತಿಯ ಹನಿಗಳಿಂದೆನ್ನ ತೊಯಿಸಲಿ ಅವಳು...
ಅದ ನೋಡಿ... ಕಿಚ್ಚುಪಡಬೇಡ ನೀ..

ಹುಣ್ಣಿಮೆಯ ಚೆಲುವು


ಶಿಶಿರಕಾಲದ ಉನ್ಮಾದ ಲಹರಿಯಲಿ
ಪತಂಗಗಳ ಪ್ರೆಮ ಪರಾಗದಲಿ
ಪ್ರೀತಿಯ ಉತ್ತುಂಗದಲಿ ನಿನ್ನ ನಾ ನೊಡಿದೆ

ವಸಂತದ ತಂಪಿನಲಿ ನೀಕಂಗೊಳಿಸುತಿರೆ..
ನಿನ್ನ ಮಂದಹಾಸ ಹಿಡಿಸುತದೆ ಸಿರಗಳಲಿ
ಪ್ರೀತಿಯ ಅಮಲನ್ನು ಗೆಳತಿ..

ಜಾಜೀಮಲ್ಲಿಗೆಯನು ಮುಡಿಗೆರಿಸಿ
ನೀಳಜಡೆಯನು ಚಿತ್ತಾರದಲಿಹೆಣೆದು
ಗೆಜ್ಜೆನಾದವನು ಹೊರಡಿಸಿ ನೀ ಬರುತಿರೆ ...

ಬೆಳದಿಂಗಳಲರಳೊ.. ಹುಣ್ಣಿಮೆಯ ಚೆಲುವು
ನಿನ್ನ ಮಂದಹಾಸದ ಮುಂದೆನು ಚೆಲುವೆ
ನಿನ್ನ ಸೊಬಗ ನಾ ಎನ್ನಮನದಲಿ ಪಿಡಿದಿಡುವೆ..

ಕವಿಗಳಿಗೆಟುಕದ ನಿನ್ನ ಚೆಲುವನ್ನ
ಬಣ್ಣಿಸಲೆಗೆ ಗೆಳತೀ ಈ ಪಾಮರ..
ಮನದಲೊಂದರಮನೆ ಮೀಸಲಿಡುವೆ ನಿನಗೆಂದೆ..

ಅವಳು

ಜೀವನಚಕ್ರದಲಿ ಬೇಟ್ಟಿಯಾದ ಮತ್ತೊಂದು ಪತಂಗ ಅವಳಾಗಿತ್ತು... ಚಿಕ್ಕವಯಸು ತುಂಬಾ ಅರಿವು.. ಅಚರಿ ಮೂಡಿಸುವಂತಾ ಬಾವನೆಗಳ ಬಂಡಾರವನ್ನೆ ಕೂಡಿಟ್ಟಿದ್ದಳು... ಸಾದರಣ ಹಳ್ಳಿಯಲೆ ಬೆಳೆದು ಬಂದವಳು.. ಆಡಂಬರದ ಜೀವನ ನಡೆಸಿದವಳಲ್ಲ... ಒಂದು ತರ ಹಳ್ಳಿ ಮುಗ್ದತೆ ಅವಳಲಿತ್ತು..
ನಾನು ತುಂಬಾ ವಿಶಯಗಳನ್ನು ಅವಳಿಂದ ಕಲಿತೆ.. ವಯಸಿನಲಿ ತುಂಬಾ ಚಿಕ್ಕವಳು.. ಜೀವನದನುಬವದಲಿ ಅವಳು ತುಂಬಾ ದೊಡ್ಡವಳು... ..ಹಾ ಇದೆಲ್ಲಾ ನಾನು ಎಕೆ ಇಲ್ಲಿ ವಿವರಿಸುವುದು ಅಲ್ಲವೆ? .. ನನಗನಿಸಿಧನ್ನು ಬರೆದೆ.. ಅವಳನ್ನೆ ಆದಾರವಾಗಿ ಒಂದು ಕಾದಂಬರಿಯನು ಬರೆದೆ... ಆದರೆ ಅದನ್ನು ಅವಳು ಒದುವ ಮನಸು ಮಾಡಿಲ್ಲ .. ಇನ್ನಾದರೂ ಅವಳು ನನ್ನ ಮಾತನ್ನು ಕೆಳುವಳೊ ಎಂದು ತಿಳಿಯಧು

ಒಮ್ಮೆ ನಾನು ಅವಳೊಂದಿಗೆ ಸಂಜೆಯಲಿ ನಡೆಯುತ್ತಿರುವಾಗ ಎಧುರಿಗೆ ಬರುವವರನೆಲ್ಲ ಮಾತನಡಿಸುತ್ತಾ ಬರುತ್ತಿದ್ದಳು.. ನನಗೆ ಇರಿಸುಮುರಿಸಾಗುತ್ತಿತ್ತು .. ಇವಳೆಕೆ ಎಲ್ಲರನ್ನು ಮಾತನಾಡಿಸುತ್ತಾಳೆ ಎಂದು.. ಆಮೆಲೆ ತಿಳಿಯಿತು ಅದು ಅವಳು ಬೆಳೆದು ಬಂದ ವಾತವರಣದ ಪ್ರಬಾವ ಎಂದು...

ವಿಶಯಗಳನ್ನು ಸೊಕ್ಶ್ಮವಾಗಿ ಗಮನಿಸಿ ಅದಕೊಂದು ಪರಿಹಾರವನ್ನು ಅವಳು ನೀಡುತಿದ್ದಳು..ಯಾವುದೆ ವಿಶಯವನ್ನು ಕೂಲಂಕಶವಾಗಿ ವಿಚಾರಿಸದೆ ಅವಳೊಂದು ನಿರ್ದಾರ ತೆಗೆದು ಕೊಳ್ಳುತ್ತಿರಲಿಲ್ಲಾ.. ಅದು ನನಗೆ ತುಂಬಾ ಪ್ರಬಾವ ಬೀರಿತ್ತು...

ನಾನು ಯಾಕೆ ಹೀಗಿಲ್ಲಾ ಎಂದು ಚಿಂತಿಸಿದ್ದು ಉಂಟು

ಹುಮ್ ಅವಳು ನನಗೆ ಕೆಲವೊಮ್ಮೆ ತಾಯಿ, ಇನ್ನೊಮ್ಮೆ ಪ್ರೀತಿಯ ಅಕ್ಕ ಮತ್ತೆ ಕೆಲವೊಮ್ಮೆ ನನ್ನ ಮುದ್ದಿನ ತಂಗಿಯಾಗಿರುತ್ತಿದ್ದಳು. ನನ್ನ ಮತ್ತು ಅವಳ ಸ್ವಬಾವ ತದ್ವಿರುದ್ದವಿದೆ, ಆದರೆ ನನ್ನ ಮತ್ತು ಅವಳ mind reading. ಒಂದೆ ಆಗಿತ್ತು.
ನಾನು ಎಸ್ಟೆ ಚನ್ನಾಗಿ ಬರೆದು ಅವಳ ಹತ್ತಿರ ಕುಳಿತು ಒದಿ ಕೆಳಿಸಿದರೆ, ( ಒದುವ ಮನಸನ್ನು ಅವಳು ಇನ್ನೊ ತೊರಿಸಿಯೆ ಇಲ್ಲ) ನನ್ನ ಮುಕ ನೊಡಿ ನಗುತ್ತಾನೆ ಇರುವಳು, ನಾನು ಕುಶಿಯಲೆ, ಒದುವುದರಲೆ ತಲ್ಲೀನಳಾಗಿ, ಅವಳ ಕಡೆ ನೊಡಿದರೆ ಅವಳು ತಲೆಯಾಡಿಸುತ್ತಾ ಕುಳಿತ್ತಿದ್ದಳು. ನನಗೆ ಕುಶಿ ಮತ್ತೆ ಆಶ್ಚರ್ಯ ಒಟ್ಟಿಗೆ, ನನ್ನ ಕವಿತೆಗಳಿಗೆ ಇವಳು ತಲೆತೂಗುತಿದ್ದಳಾ ಎಂದು, ನೊಡಿದರೆ ಗೊತ್ತಾಯಿಥು ಅವಳು, ಕಿವಿಗೆ..... ಇಟ್ಟು.. ಹಾಡನ್ನು ಕೆಳುತ್ತಾ ಕುಳಿತಿದ್ದಾಳೆ ಎಂದು.

ನನಗೆ ಯಾವುದೆ ನಂಬಿಕೆ ಇಲ್ಲ ಅವಳು ಇದನ್ನು ಪೂರ್ನವಾಗಿ ಒದುವಳು ಎಂದು..ಆದರೂ " ಹೆ ! ಹುಡುಗಿ, ನೀನು ಯಾವತ್ತಾದರು ಒಣ್ದು ದಿನವಾದರು ನಿನ್ನ ಡಯರಿಯ ಪುಟಗಳನ್ನು ತಿರುಗಿಸುವಾಗ ನನ್ನ ಬ್ಲಾಗ್ಸ್ ಸ್ಪೊಟ್ ನ ಹೆಸರು ನಿನಗೆ ತಿಳಿದೆ ತಿಳಿವುದು ಎಂದು, ಆವಾಗಲು ನೀನು ನನ್ನ ಈ ಬ್ಲಾಗ್ ಅನ್ನು ಒದರೆ ಹೊದರೆ, ಮುಂದಿನ ಜನುಮದಲ್ಲಿ ಮತ್ತೆ ಬಂದು ನಿನ್ನ ಕಾಡುವೆ"...

ಹಹಹ್ ಅವಳಿಗೆ ಬೂತಗಳ ಮೇಲೆ ಸ್ವಲ್ಪ ಬಯವಿದೆ, ಅದಿಕ್ಕೆ ಅವಳು ಕಣ್ಣಡಿಯನ್ನು ನೊಡಲು ಬಯ ಪಡುವಳು. (ಆವಳನ್ನು ರೆಗಿಸಲು. ಅವಳು ತುಂಬಾ ಸುಂದರಿಯಾಗಿದ್ದಾಳೆ), ಕೊನೆಗೆ ನನ್ನ ಈ ಬೆದರಿಕೆಗೆಯಾದರು ಅವಳು, ಒದಬಹುದು.

ಎರಡು ಸಲ ನಾನು ಅವಳನ್ನು ಬಿಟ್ತು ದೂರ ಹೊಗಿದ್ದೆ, ಇನ್ನು ಅವಳ ಜೊತೆ ಮೊದಲಿನ ಹಾಗೆ ಇರುವುದು ಕನಸಿನ ಮಾತಿರಬಹುದು. ಯಾಕೆಂದರೆ, ಇವಾಗ "ನಾನೊಂದು ತೀರ , ಅವಳೊಂದು ತೀರ" ನನ್ನ ವ್ಯಕ್ತಿತ್ವವನ್ನೆ ಬದಲಾಯಿಸಿದವಳು ಅವಳು. ಆದರೆ ಅವಳು ಯಾವತ್ತು ಕೂಡ ನನಗೆ ಬುದ್ದಿ ಹೆಳಿಲ್ಲಾ. ನಾನು ಮಾಡಿದ್ದು ತಪ್ಪು ಅಂತಾನು ಹೆಳಿಲ್ಲಾ... ಮಾತಿನಿಂದ ಅವಳು ನನ್ನ ತಿದ್ದಿಲ್ಲ.. ವರ್ತನೆಯಿಂದ ತಿದ್ದಿದಳು..

ಆದರೆ, ನಾನು ಅವಳ ಜೊತೆ ಕಾರಣವಿಲ್ಲದೆ ಮೂರು ದಿನ ಮಾತು ಬಿಟ್ಟೆ... ಆ ದಿನಗಳ ಬಗ್ಗೆ ನಾವು ಮತ್ತೆ ಕೂತು ಮಾತನಾಡಿದೆವೆ, ಆವತ್ತು ನಮಗೆ ಮೊದಲು ಅಳು, ಆಮೆಲೆ ನಗು.. ನಾವು ಯಾಕೆ ಈ ತರ ಮಾಡಿದ್ದು ಎಂದು... ನಮಗೆ ಕೊನೆಗೂ ಗೊತ್ತ್ತಾಗಲೆ ಇಲ್ಲಾ.. ನಮ್ಮ ಆ ಒಣ ಮುನಿಸಿಗೆ ಕಾರಣ ಎನು ಎಂದು.. ಆ ಮೂರು ದಿನಗಳಲಿ.. ನಾವಿಬ್ಬರು ತುಂಬಾ ಚಟಪಡಿಸಿದೆವು.... ಒಬ್ಬರ ಮುಕ ನೊಡಿಯು ನೊಡದವರ ತರ ಇರುವವರ ಕಶ್ಟ .. ನಮಗೆ ಆವತ್ತು ಅರ್ತವಾಯಿಥು (ಅತ್ತೆ -ಸೊಸೆ)...ಅದಕ್ಕೆ ನಾವು ತೀರಮಿಸಿದೆವು,.." ಅತ್ತೆ ಸೊಸೆ ಜಗಳ ತುಂಬಾ ಬೊರ್ ಇರಬಹುದು ಎಂದು"...

ಅವಳನ್ನು ನಾನು ನೋಡದೆ ೯ ತಿಂಗಳುಗಳು ಆಗಿದೆ...

I Mis you Tinkuu

ನೀ ನುಡಿಯುವ ಮಾತೆಲ್ಲಸಿಹಿ ಪದಗಳಾದರೆಕವಿಗೆನು ಕೆಲಸ ..ನೀ ಹಾಡುವಪದವೆಲ್ಲ ಸಂಗೀತವಾದರೆಕೋಗಿಲೆಗೆ ಏನು ಕೆಲಸಮೌನ ಮನದ ತೀರದಲಿನೀ ಅಲೆಯಾದರೆಕಂಪು ಸೂಸುವಗಾಳಿಗೇನು ಕೆಲಸ ..ನೋಟ ಸರಿಯದನಿನ್ನ ಮುಗ್ದ ಅಂದಕೆಭೂಮಿಯೇ ಹೊಲಿಕೆಯಾದರೆಸೂರ್ಯ ಚಂದ್ರರಿಗೆಏನು ಕೆಲಸ ....ನಿನ್ನ ಮುಂಗುರುಳುಸರಿಸಿ ನಿನ್ನ ನೋಡುವಕಾತುರ ಗಾಳಿಗಿರಲುಬಿಸಿಲಿಗೆನು ಕೆಲಸ ..... ಸುಮ್ಮನೆ ಎಲ್ಲರ ಮನ ಕದಿಯುವೆಯಲ್ಲಇದೇನಾ ನಿನ್ನ ಕೆಲಸ ..

ರಾಧೆ


ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು
ನನಗು ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು
ತಿಂಗಳ ರಾತ್ರಿ ತೊರೆಯ ಸಮೀಪ
ಉರಿದರೆ ಯಾವುದೋ ದೀಪ
ಯಾರೊ ಮೋಹನ ಯಾವ ರಾಧೆಗೋ
ಪಡುತಿರುವನು ಪರಿತಾಪ
ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ
ಭಾವಿಸಿ ಸೆರಲು ಬೃಂದಾವನವ
ರಾಧೆ ತೋರುವಳು ದಾರಿ
ಮಹಾಪ್ರವಾಹ... ಮಹಾಪ್ರವಾಹ
ಮಹಾಪ್ರವಾಹ... ಮಹಾಪ್ರವಾಹ
ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ
ತೊರೆದರು ತನ್ನ ತೊರೆಯದು ಪ್ರಿಯನ
ರಾಧೆಯ ಪ್ರೀತಿಯ ನೀತಿ ಇದು
ರಾಧೆಯ ಪ್ರೀತಿಯ ನೀತಿ..

ಸ್ರಷ್ಟಿ ಚುಂಬಕ ನಿನ್ನ ದ್ರಷ್ಟಿಯಲ್ಲಿ
ಸ್ರಷ್ಟಿ ಚುಂಬಕ ನಿನ್ನ ದ್ರಷ್ಟಿಯಲ್ಲಿ
ಅನಾವೃಷ್ಟಿಯಲ್ಲೂ ಸುರಿಯುತ್ತಿರುವೆ ನೀ ಮಳೆಯಾಗಿ.
ತಂಪಾದ ಧರೆ ,ದೊರೆಯಂತೆ ಕಂಡು
ತುಂಬಿಸಿಕೊಂಡಿವೆ ತನ್ನೆದೆಯ ತುಂಬಾ ಹಸಿರಿನಾ ಸಿರಿ.
ಉಸಿರಾಗಿ ಬರುವ ನೀನೊಂದು ಗಾಳಿ ,
ಸಿಹಿಸುದ್ದಿ ಉಲಿದು ,
ಅಲೆದಲೆದು ಬಂದು ನೆಲೆಸಿರುವೆ ನನ್ನಲ್ಲಿ .
ಕಣ್ಣಿಗೆ ಕಾಣುವ ಸುಂದರ ಮಳೆಬಿಲ್ಲು ನೀನು ,
ನುಣುಪಾದ ಮುಗಿಲು ಹಗಲಲ್ಲಿ ಹೊಳೆದೊಳೆದು
ಚಿತ್ತಾರ ಬಿಡಿಸಿವೆ ನನ್ನಲ್ಲಿ .
ಕಾಣುವೆನು ನಿನ್ನಲ್ಲಿ ಈ ಜಗವು ನನ್ನಲ್ಲಿ
ನಾನೆಂಥ ಧನ್ಯ ನೀನಿರಲು ಜೊತೆಯಾಗಿ

ಒಂದು ಯಾತ್ರೆಯ ನೆನಪಿನಲ್ಲಿ..


 ಮದ್ಯಾನದ ಉರಿ ಬಿಸಿಲಿನಲ್ಲಿ ನಾನು  ನನ್ನ ಅತ್ತೆಯ ಜೊತೆ ಟ್ರೈನಿನಲ್ಲಿ ಊರಿಗೆ ಹೊರಟ್ಟೀದ್ದೆ..... ಮದ್ಯಾನದ ಆಲಸ್ಯದಲ್ಲಿ ಎಲ್ಲರು ನಿದ್ರಿಸುವ ಹಂಬಲ...ಆದರೆ ಕೂರಲಿಕ್ಕೆ ಜಾಗ ಇಲ್ಲದೆ ಕೆಲವರು ಅತ್ತ ಇತ್ತ ಒಡಾಡುತಿದ್ದಾರೆ... ನನ್ನ ಕರುಣಾಮಯಿ ಆದ ಅತ್ತೆ ನಮ್ಮ ರಿಸರ್ವ್ ಮಾಡಿರುವ ಸೇಟಿನಲ್ಲಿ ಸ್ವಲ್ಪ ಜಾಗವನ್ನು ಒಂದು ಹೆಂಗಸಿಗೆ ಕೊಟ್ಟರು. ಅವರ ಮಡಿಲಲ್ಲಿ ಒಂದು ಮಗು , ಸ್ವಲ್ಪ ಹೊತ್ತಿನಲ್ಲಿ ಮತ್ತಿಬ್ಬರು  ಮಕ್ಕಳು ಕೂಡ ಅವರ ಹತ್ತಿರ ಬಂದರು. ಆಮೆಲೆ ಗೊತ್ತಾಯಿಥು ಅವರು ಕೂಡ ಅವರ ಜೊತೆ ಇರುವೆ ಮಕ್ಕಳೆ ಎಂದು. ಸ್ವಲ್ಪ ಹೊತ್ತು ಕಸ್ಟಪಟ್ಟೆ ಕೂತೆ . ನನ್ನ ಮನಸು ಅಸ್ಟು ವಿಶಾಲವಾಗಿರಲಿಲ್ಲ... ಆದರೆ ನಮ್ಮ ಅತ್ತೆಗೆ ಕೂರಲಿಕ್ಕೆ ಜಾಗ ಇಲ್ಲ ಅಂಥ ನಾನು ಕೊನೆಗೆ ಸರಿಯಲೆ ಬೆಕಾಯಿತು.ಗಾಡಿ ಮುಂದೆ ಹೊಗುತ್ತಾನೆ ಇತ್ತು. ಆ ತಾಯಿ ತನ್ನ ಚೀಲದಲ್ಲಿ ಎನೊ ಹುಡುಕಲು ಸುರು ಮಾಡಿದರು.. ನನ್ನ ಕೂತುಹಲಕ್ಕೆ ಅವರ ಕಡೆಗೆನೆ ದ್ರುಸ್ಟಿ ಹಾಯಿಸಿ ಕೂತೆ. ಕೊನೆಗೆ ಅವರು ನನ್ನ ಕಡೆ ನೊಡಿ ಒಂದು ಒಣ ನಗುವನ್ನು ಬೀರಿ ಮತ್ತೆ ಸುಮ್ಮಗಾದರು. ನನ್ನ ಕುತೂಹಲ ಇನ್ನು ಹೆಚಾಯಿಥು. ಮೆಲ್ಲ ಮಕ್ಕಳನು ಕರೆದು ಪಕ್ಕದಲ್ಲೆ ಕೂರಿಸಿ ಮಾತನಡಿಸಿದೆ. ಅವರ ಹೆಸರು ಕೆಳಿದಾಗ ಅವರಿಗೆ  ಹೆಸರು ಹೆಳಬೆಕನೆಸಿದರು ಒಂದು ನಗುವಲ್ಲೆ ನಿಲ್ಲಿಸಿದರು.  ಮಡಿಲಲ್ಲಿರುವ ಪುಟ್ಟ ಕೂಸು.. ವಿಚಿತ್ರವಾಗೈ ನರಳುತ್ತಾ.. ಇತ್ತು.

ಗಾಡಿಯಲ್ಲಿ ಮಾರಲಿಕ್ಕೆ ಸಿಕ್ಕಿದ ಲೆಸ್ ನಾನು ಮಕ್ಕಳಿಗೆ ಕೊಡಿಸಿ ಅವರ ತಾಯಿಗೂ ಒಂದು ಕೊಟ್ಟೆ. ಅದನ್ನು ತಗೊಂಡು ಮಕ್ಕಳಿಗೆ ತಿನ್ನಿಸಿದರು. ಮಕ್ಕಳ ಮುಕದಲ್ಲಿನ ಕುಶಿ  ವಿವರಿಸಲಿಕ್ಕೆ ಆಗೊ ತರ ಇರಲಿಲ್ಲ... ಅಸ್ಟೊಂದು ಕುಶಿ. ಕೊನೆಗೆ ಅವರ ತಾಯಿಯ ಜೊತ್ ನಾನು ಮಾತನದಲಿಕ್ಕೆ  ಆರಂಬಿಸಿಸ್ದೆ. ಅವಾಗ ಅವರು ಹೆಳಿದ ಮಾತುಗಳು ನನ್ನ ಮೂಕಿ ಮಾಡಿಥು. ಅವರದು ಅತಿ ಕಸ್ಟವಾದ ಒಂದು ಪರಿಸ್ತಿತಿ. ಅವರ ಪತಿ ಮರಣ ಹೊಂದಿ ಎರಡು ವರ್ಶವಾಗಿದೆ. ಅವರ ಮೊದಲನೆ ಪತ್ನಿ ಅವರನ್ನು  ಮತ್ತು ಈ ಎರಡು ಮಕ್ಕಳನ್ನು ಬಿಟ್ಟು ಎಲ್ಲೊ ಹೊರಟು ಹೊದರು, ನಂತರ ಇವರ ಜೊತೆ ಮದುವೆ ಆಯಿಥು. ಇವರದ್ದೆ ಆ ಪುಟ್ಟ ಕೂಸು.


 ಅ ಎರಡು ದೊಡ್ಡ ಮಕ್ಕಳು ಮತ್ತು  ಈ ತಾಯಿ ಕೂಡ ತಮ್ಮ ಮರಣವನ್ನು ಕಾಯುತ್ತಾ ಇದ್ದರೆ. ಆ ಮಾಥು ಕೆಳಿ..  ಮುಂದೆನು ಮಾತನಾಡಲಿ ಎಂದು ನನಗೆ ತೊಚಲೆ ಇಲ್ಲ. ಕೊನೆಗೆ ಅವರು ಹೆಳಿದರು ಅವರ ಗಂಡ ಮತ್ತೆ ಮೊದಲನೆಯ ಎರಡು ಮಕ್ಕಳಿಗೆ ಎಡ್ಸ್ ಅನ್ನುವ ಮಹಾಮಾರಿ ಇಧೆ ಅಂಥ. ಎನು ಅರಿಯದ ಇವಳನ್ನು ಮದುವೆ ಆಗಿ ಇವಳಿಗೂ ಹಬ್ಬಿಸಿ ಇವಳ ಜೀವನವನ್ನು ನರಕ ಮಾಡಿ ಅವನು ಹೊಗೆ ಬಿಟ್ಟಾ. ಇವಳು ಒಂದು ತಾಯಿ ಮೂರು ಮಕ್ಕಳು. ಮುಂದೆನು ಎಂದು ಕೆಳಿದರೆ ಅವರ ಆ ಬರವಸೆಯ ಮಾತು   , ಕಾಲ ಎಸ್ಟೆ ಕೆಟ್ಟರು ಮೇಲೆ ಇರುವವನು ಕೆಟ್ಟಿಲ್ಲ ಸಾವಿರ ಬಾಗಿಲು ಮುಚಿದರು ನಮ್ಮ ಪಾಲಿನ ಮರಣದ ಬಾಗಿಲನ್ನು ಅವನು ತೆರೆದಿರುತ್ತಾನೆ... ಅದಕ್ಕಿಂಥ ಕುಶಿ ಎನು? ಆ ಅಂಥರದಲ್ಲಿ ದೆವರ ತರ ಇರುವ ಮನುಷ್ಯರು ಸಿಕ್ಕೆ ಸಿಗುತ್ತಾರೆ.... ’


ಕೆಲವು ಕ್ಶಣಗಳು ನನಗೆ ಉತ್ತರವೆ ಇರಲಿಲ್ಲ... ನಮ್ಮ ಈ ಚಿಕ್ಕ ಜೀವನದಲ್ಲಿ ನಾವು ಯಾರಿಗೆ ಲಾಬವಿಲ್ಲದೆ ಸಹಾಯ ಮಾಡಿದ್ದೆವೆ ಎಂದು.

Dec 26, 2012

ನದಿಯ ತೀರದಲಿ ಅವಳು...ನಧಿಯ ತೀರದಲ್ಲಿ ಅವಳು ಯಾಕೆ ಹೊದಳು... ???

ಊಹಿಸಿ.. ಉತ್ತರ ಹೊಳೆಯಲಿಲ್ಲವ...

ಅವಳು ನದಿಯ ತೀಅದಲ್ಲಿ ಸುಮ್ಮನೆ ಹೊಧಳು... ಹಿಹಿಹಿ...

ಹೀಗೆ ಸುಮ್ಮನೆ

ಭಂದೀಕಾನೆ

ಬಾವನೆಗಳ ಬಂದೀಕಾನೆಯಲೆನ್ನಾ
ಕೂಡಿಟ್ಟು.. ಎಲ್ಲಿರುವೆ ನೀ ಗೆಳೆಯಾ

ಕಾದಿರುವೆ ನಾ ನಿನಗೆಂದೆ ಎಳುಜನುಮ
ಬರದೆ ಹೂಗುವೆಯಾ ನೀ ನನ್ನರಮನೆಗೆ

ಮಂಜಿನ ಹನಿಗಳಿಂದ ಪೊಣಿಸಿದ ನನ್ನ
ರಕ್ಕೆಗಳು ಸಾಲದು ನಿನ್ನ ಬಳಿ ಬರಲು

ಅಂತರಂಗದ ಚಕ್ರವ್ಯೂಹವನು ಬೆದಿಸಿ
ಬರುವೆಯಾ ಆತ್ಮದ ಅರಮನೆಗೆ ಕರೆದೊಯ್ಯುವೆಯಾ

ಬರುವೆಯಾ ನೀ ಗೆಳೆಯಾ ಎನ್ನ ಬಿಡಿಸಲು
ಸೆರಿಸುವೆಯಾ ನಿನ್ನ ತೊಳಲೆನಾ ಓ ಗೆಳೆಯಾ?

Nov 15, 2012

ಹೇಳಲಾಗದ ನೂರು ಭಾವ !

ಹೇಳಲಾಗದ ನೂರು ಭಾವ ! ಹೇಳಿ ಕೊಳ್ಳಲಾಗದ ವೇದನೆ !
ಏನೋ ಅರಿಯೆ ! ಮನದಲಿ ! ಸಂಕಟ !
ಯಾಕೆ ಹೀಗಾಯ್ತೋ ? ಏನಾಯ್ತೋ ? ಅರಿವಿಲ್ಲ !
ಹಚ್ಚಿಕೊಂಡ ಬದುಕು ! ಕನಸಾಗಿದೆಯಲ್ಲ !
ಕಟ್ಟಿ ಕೊಂಡ ಕನಸು ! ಇನ್ನು ಕೂಡ ನನಸಾಗಿಲ್ಲ !
ಬದುಕು ಇಲ್ಲರಿಗೂ ಹೀಗೆನಾ ? ಅಥವಾ ನಮಗೆ ಮಾತ್ರ ಹೀಗೆನಾ ?
ಒಪ್ಪಿಕೊಂಡ , ಹರಸಿಕೊಂಡ ಪ್ರೀತಿ ನಮದಾಗಲಿಲ್ಲ !
ನಂಬಿದವರು ನಮ್ಮ ನಂಬಿಕೆಯ ಉಳಿಸಿಕೊಳ್ಳಲಿಲ್ಲ !
ಅರಳಿದ ಪ್ರೀತಿ ! ಚಿಗುರುವ ಮುನ್ನ ಚಿವುಟಿದಿರಲ್ಲ !
ಅರಳಿದ ಹೂವು ! ಮುಡಿಗೆರುವ ಮುನ್ನ ಬಾಡಿಸಿದಿರಲ್ಲ !
ಎಷ್ಟೊಂದು ವಿಶ್ವಾಸ ನಂಬಿಕೆ ಪ್ರೀತಿಯಲಿ !
ಅದು ನೀಡಿದ ನೋವ ನಾ ಈಗ ಯಾರಿಗೆ ಹೇಳಲಿ !
ನಾವು ಹಚ್ಚಿಕೊಂಡವರು ! ನಮ್ಮ ನೆಚ್ಚಿ ಕೊಳ್ಳಲಿಲ್ಲ !
ನೆಚ್ಚಿಕೊಳ್ಳದೆ ಬಂದವರು ! ಬದುಕಾದರಲ್ಲ !
ಮನ ಮತ್ತೆ ಸಾವಿರ ಕನಸ ಕಟ್ಟುವುದು ತಪ್ಪಲಿಲ್ಲ !
ನಾ ಕಟ್ಟಿದ ಕನಸು ಎಂದು ನನಸಗುವುದೋ ಅರಿವಿಲ್ಲ !
ಹುಚ್ಚು ಮನ ! ಆ ಆಸೆಯೊಳಗೆ ಕಾಯುತಿದೆಯಲ್ಲ !
ಬರಬಹುದೇ ನನಗೂ ಒಂದಲ್ಲ ಒಂದಿನ ! ಗೊತ್ತಿಲ್ಲ !
ಪ್ರೀತಿಗಾಗಿ ! ದಿನ ಕಾಯುವುದು ತಪ್ಪಲಿಲ್ಲ !
ಏನ ಮಾಡಿದೆ ದೇವ ನಿನಗೆ ! ಅದರಲಿ ನನ್ನ ತಪ್ಪಿಲ್ಲ !
ಇಲ್ಲದ ! ಯೋಚನೆಯೊಳಗೆ ಮನ ಕೊರಗುತಿದೆಯಲ್ಲ !
ಬರಲಿ ! ಹಾಗೆಯೆ ! ಒಂದು ದಿನ !
ನನ್ನ ನಲಿವ್ಲಿಗೆ ! ನನ್ನ ಖುಷಿಗೆ ! ನಾನು ಕುಣಿದಾಡುವ ದಿನ !
ನನ್ನ ಪ್ರೀತಿ ನನ್ನನೋಪ್ಪಿಕೊಂಡ ದಿನ !
ಕಾಣುವೆ ಭುವಿಯಲಿ ! ಸ್ವರ್ಗವ ಆ ದಿನ ಹೇಳಲಾಗದ ನೂರು ಭಾವ ! ಹೇಳಿ ಕೊಳ್ಳಲಾಗದ ವೇದನೆ !
ಏನೋ ಅರಿಯೆ ! ಮನದಲಿ ! ಸಂಕಟ !
ಯಾಕೆ ಹೀಗಾಯ್ತೋ ? ಏನಾಯ್ತೋ ? ಅರಿವಿಲ್ಲ !
ಹಚ್ಚಿಕೊಂಡ ಬದುಕು ! ಕನಸಾಗಿದೆಯಲ್ಲ !
ಕಟ್ಟಿ ಕೊಂಡ ಕನಸು ! ಇನ್ನು ಕೂಡ ನನಸಾಗಿಲ್ಲ !
ಬದುಕು ಇಲ್ಲರಿಗೂ ಹೀಗೆನಾ ? ಅಥವಾ ನಮಗೆ ಮಾತ್ರ ಹೀಗೆನಾ ?
ಒಪ್ಪಿಕೊಂಡ , ಹರಸಿಕೊಂಡ ಪ್ರೀತಿ ನಮದಾಗಲಿಲ್ಲ !
ನಂಬಿದವರು ನಮ್ಮ ನಂಬಿಕೆಯ ಉಳಿಸಿಕೊಳ್ಳಲಿಲ್ಲ !
ಅರಳಿದ ಪ್ರೀತಿ ! ಚಿಗುರುವ ಮುನ್ನ ಚಿವುಟಿದಿರಲ್ಲ !
ಅರಳಿದ ಹೂವು ! ಮುಡಿಗೆರುವ ಮುನ್ನ ಬಾಡಿಸಿದಿರಲ್ಲ !
ಎಷ್ಟೊಂದು ವಿಶ್ವಾಸ ನಂಬಿಕೆ ಪ್ರೀತಿಯಲಿ !
ಅದು ನೀಡಿದ ನೋವ ನಾ ಈಗ ಯಾರಿಗೆ ಹೇಳಲಿ !
ನಾವು ಹಚ್ಚಿಕೊಂಡವರು ! ನಮ್ಮ ನೆಚ್ಚಿ ಕೊಳ್ಳಲಿಲ್ಲ !
ನೆಚ್ಚಿಕೊಳ್ಳದೆ ಬಂದವರು ! ಬದುಕಾದರಲ್ಲ !
ಮನ ಮತ್ತೆ ಸಾವಿರ ಕನಸ ಕಟ್ಟುವುದು ತಪ್ಪಲಿಲ್ಲ !
ನಾ ಕಟ್ಟಿದ ಕನಸು ಎಂದು ನನಸಗುವುದೋ ಅರಿವಿಲ್ಲ !
ಹುಚ್ಚು ಮನ ! ಆ ಆಸೆಯೊಳಗೆ ಕಾಯುತಿದೆಯಲ್ಲ !
ಬರಬಹುದೇ ನನಗೂ ಒಂದಲ್ಲ ಒಂದಿನ ! ಗೊತ್ತಿಲ್ಲ !
ಪ್ರೀತಿಗಾಗಿ ! ದಿನ ಕಾಯುವುದು ತಪ್ಪಲಿಲ್ಲ !
ಏನ ಮಾಡಿದೆ ದೇವ ನಿನಗೆ ! ಅದರಲಿ ನನ್ನ ತಪ್ಪಿಲ್ಲ !
ಇಲ್ಲದ ! ಯೋಚನೆಯೊಳಗೆ ಮನ ಕೊರಗುತಿದೆಯಲ್ಲ !
ಬರಲಿ ! ಹಾಗೆಯೆ ! ಒಂದು ದಿನ !
ನನ್ನ ನಲಿವ್ಲಿಗೆ ! ನನ್ನ ಖುಷಿಗೆ ! ನಾನು ಕುಣಿದಾಡುವ ದಿನ !
ನನ್ನ ಪ್ರೀತಿ ನನ್ನನೋಪ್ಪಿಕೊಂಡ ದಿನ !
ಕಾಣುವೆ ಭುವಿಯಲಿ ! ಸ್ವರ್ಗವ ಆ ದಿನ

Oct 18, 2012

ಮನವು ಕಂಡ ಕನಸುಗಳು ಹಲವು 
ನನಸಾಗದೆ ಉಳಿದು ಹೋಗಿದ್ದು ಕೆಲವು 
ನೀನಾಗದೆ ಹೋದೆ ನನ್ನ ಪ್ರೀತಿಯ ಹೂವು 
ಮನದಲಿ ದುಗುಡ ತುಂಬಿದೆ ಅದಕೆ ನೀನೆ ಕಾರಣವು !

ಹೇಳಿಕೊಳ್ಳ ಬೇಕಾಗಿತ್ತು ನಾ ನನ್ನ ಪ್ರೀತಿಯನು 
ಹೇಳದೆ ಹೋಗಿದ್ದು ಏಕೆ ಕಾರಣ ಅರಿಯೆನು 

ಅಳದೆ ಹೋದರೆ ತಾಯಿ ಕೂಡ ಮಗುವಿಗೆ ಹಾಲನು ಉಣಿಸುವುದಿಲ್ಲ
ಹೇಳಿ ಕೊಳ್ಳದೆ ಹೋದರೆ ಪ್ರೀತಿ ಯಾರಿಗೂ ದೊರೆಯುವುದಿಲ್ಲ 
ನಂಬಿಕೆ ಇದ್ದರೆ ನಮ್ಮಲ್ಲಿ ನಾವ್ಯರಿಗೂ ಹೆದರ ಬೇಕಿಲ್ಲ 
ಸತ್ಯದ ಹಾದಿಯಲಿ ನಾವಿದ್ದರೆ ಜಯ ನಮ್ಮ ಕೈ ಬಿಡುವುದಿಲ್ಲ !

ಎಲ್ಲ ಗೊತ್ತಿದ್ದೂ ನಾನ್ಯಾಕೆ ನಿನಗೆ ನನ್ನ ಮನದ ನುಡಿಯ ನುಡಿಯಲಿಲ್ಲ 
ನೀನೆ ಅರ್ಥ ಮಾಡಿಕೊಳ್ಳುವೆ ಎಂಬ ನಂಬಿಕೆಯಲಿ ನಾನಿದ್ದೇನಲ್ಲ 
ಅರಿವಿತ್ತ ನಿನಗೆ ನನ್ನ ಪ್ರೀತಿ ನನಗೆ ಅರಿವಿಲ್ಲ್ಲ 
ಹುಚ್ಚು ಆತ್ಮ ವಿಶ್ವಾಸದಲಿ ನಾನು ಕಾದು ಕುಳಿತಿದ್ದೇನಲ್ಲ !

ಅರಿವಿಲ್ಲದೆ ನೀ ಮರೆಯಾಗಿ ಹೋದದ್ದು ನಾ ಗಮನಿಸಲಿಲ್ಲ 
ಏನೋ ವೇದನೆಯಲಿ ಮನ ರೋದಿಸುತಿವುದು ಅದ ತಡೆಯುವರು ಯಾರಿಲ್ಲ !
ಮನ ಕಂಡ ಎಷ್ಟೋ ಕನಸದು ಕೊನೆಗೂ ನನಸಾಗಲೇ ಇಲ್ಲ !

Apr 9, 2012

ನೊಂದ ಮನದವರಲ್ಲಿ ನಲಿವನ್ನೆಲ್ಲಿಂದ ಕೇಳಲಿ

ನೊಂದ ಮನದವರಲ್ಲಿ ನಲಿವನ್ನೆಲ್ಲಿಂದ ಕೇಳಲಿ
ನೊಂದ ಮನದವರಲ್ಲಿ ನಲಿವನ್ನೆಲ್ಲಿಂದ ಕೇಳಲಿ
ಹುಟ್ಟು ಕುರುಡಾದ ಪ್ರಪಂಚ ನಾನ್ಹೇಗೆ ಕಣ್ಣು ತೆರೆಯಲಿ
ಮೌನದಲ್ಲಿ ಮುಳುಗಿದ ಮನ ಮಾತನ್ನೆಲ್ಲಿಂದ ಆಡಲಿ
ಕಿತ್ತು ತಿನ್ನುವ ಜಗ ನಾನ್ಹೇಗೆ ಹಂಚಿ ತಿನ್ನಲಿ

ಇಚ್ಚೆಯನರಿಯದೆ ಬದುಕುವ ಜನ ಇವರ ಜೊತೆ ನಾನ್ಹೇಗೆ ಬಾಳಲಿ
ಪಿಸು ಮಾತಾನರಿಯದ ಮನ ಇವರಿಗೆ ಹೃದಯವನ್ನು ಹೇಗೆ ನೀಡಲಿ
ಆಡಲು ದನಿಯಿಲ್ಲ , ಮಾತಿಗೆ ಬೆಲೆಯಿಲ್ಲ , ಇವರ ನಾನೇನೆಂದು ಕೇಳಲಿ
ಬದುಕಿನ ಅರ್ಥ ಗೊತ್ತಿಲ್ಲ , ಇವರ ಜೊತೆ ನಾನ್ಹೇಗೆ ಬದುಕನುಡುಕಲಿ!

ಅರಿತು ಕೊಂಡು ಆರಿಸಿ ಕೊಂಡ ಸ್ನೇಹ ಉಳಿಯಲಿಲ್ಲ ಯಾರ ದೂರಲಿ
ನಂಬಿಕೆಯಿಟ್ಟು ಹಂಚಿಕೊಂಡ ಭಾವನೆಗೆ ಮೋಸ ಮಾಡಿದರೆ ಯಾರ ನಂಬಲಿ
ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿಯಾದರೆ ನಾನೇನು ಮಾಡಲಿ
ನಂಬಿಕೆ ಇಲ್ಲ ಜಗ , ಜನ ನಾನ್ಯಾರ ನಂಬಲಿ
ಒಡಲಿಗೆ ಕೊಳ್ಳಿ ಇಟ್ಟು ಹೊರಟವರ ಏನೆಂದು ಕರೆಯಲಿ !

ಏನೆಲ್ಲಾ ಮೇಲೆ ನಮಗೆ ಪ್ರೀತಿಯ ನೀಡಿದರೂ ಒಳಗಿನ ಮುಖ ಹೇಗೆ ತಿಳಿಯಲಿ
ಸಂಬಂಧಗಳ ಬೆಲೆ ಗೊತ್ತಿರದವರಲ್ಲಿ ಸಂಬಂಧವ ಹೇಗೆ ಬೆಳೆಸಲಿ
ಅನಿರಿಕ್ಷಿತವಾಗಿ ದೊರೆತವರ ನಾನ್ಹೇಗೆ ಅನುಮಾನಿಸಲಿ
ಒಪ್ಪಿಕೊಂಡ ಸ್ನೇಹದಲ್ಲಿ ದೋಷವನೆಲ್ಲಿಂದ ಕಾಣಲಿ
ಬೆನ್ನಿಗೆ ಇರಿದು ಹೋದವರ ನೆನೆದು ಏನೆಂದು ಕರೆಯಲಿ !..

ಮೌನದಿ ರೋಧಿಸುತಿದೆ ಮನ ನೆಮ್ಮದಿಯನ್ನೆಲ್ಲಿ ಹುಡುಕಲಿ
ವಂಚಿಸಿ ಹೋದವರ ನೆನೆದು ಏನು ಪ್ರಯೋಜನವಿಲ್ಲ ಏನು ಮಾಡಲಿ
ಚಿತ್ರ ವಿಚಿತ್ರ ಜನರ ಪ್ರಪಂಚ ಇಲ್ಲೇ ಬದುಕಬೇಕು ಅವಸರದಲಿ !

Mar 27, 2012

ಮೀಟಲು ಆಗುವುದಿಲ್ಲ ! ಕಲ್ಲಿನ ವೀಣೆಯನು !ಅರಿಯಲು ಸಾದ್ಯವಿಲ್ಲ ! ಮನಸಿನ ಭಾವನೆಯನು !ಕಂಡು ಹಿಡಿಯಲು ಆಗುವುದಿಲ್ಲ ! ಮೀನಿನ ಹೆಜ್ಜೆಯನು !ಹಾಗೆಯೆ ! ಅನುಭವಿಸಬೇಕು ! ಸ್ನೇಹದ ! ಆನಂದವನು !ವರ್ಣಿಸಲು ಸಾದ್ಯವಿಲ್ಲ ! ಸ್ನೇಹವೆಂದರೆ ಏನೆಂದು !ಅನುಭವಿಸಬೇಕು ! ಆನಂದಿಸಬೇಕು ! ಕೇಳಬೇಡ ಏಕೆಂದು !ಕಾಣದ ದೇವರ ನೆನೆದು ! ಅವನ ದಯೆ ಕೋರುವ ಜನ ನಾವು !ಅರಿಯುವುದಿಲ್ಲ ಏಕೆ ನಿರ್ಮಲ ಸ್ನೇಹದ ನೋವು !ಭಾವಿಸುವುದಿಲ್ಲ ಏಕೆ ! ಸ್ನೇಹ ಒಂದು ಮದುರ ಸಂಬಂದವೆಂದು !ಕಟ್ಟುವಿರೆಕೆ ! ಅದಕೂ ! ಸಲ್ಲದ ಕಥೆಗಳನು !ಬದುಕು ಅಂದರೆ ! ಏನೆಂದು ! ಅರಿಯಬೇಕಿದೆ ನಾವಿಂದು !ನಗಿಸಲು ಸಾದ್ಯವದಿದ್ದರೂ ಚಿಂತೆಯಿಲ್ಲ ! ಆದರೆ ಸುಮ್ಮನೆ ಅಳಿಸಬೇಡಿ !ಕಣ್ಣೀರು ಒರೆಸದಿದ್ದರೂ ಪರವಾಗಿಲ್ಲ ! ಆದರೆ ಸುರಿಯುವ ಹಾಗೆ ಮಾಡಬೇಡಿ !ನಿಮಗೆ ಸ್ನೇಹದಲಿ ನಂಬಿಕೆ ಇರದಿದ್ದರೆ ಚಿಂತೆಯಿಲ್ಲ !ಆದರೆ ನಂಬಿದವರ ನಂಬಿಕೆಯ ಕೆಡಿಸಬೇಡಿ !ಜಗದಲಿ ! ಕಣ್ಣಿಲ್ಲದ್ದವರಿಗಿಂತ ! ಕಣ್ಮುಚ್ಚಿ ಕುಳಿತವರೇ ಹೆಚ್ಚ್ಚು !ಕನಸು ಕಾಣುವವರಿಗಿಂತ ! ಕನಸು ಕಳೆದು ಕೊಂಡ ವರೇ ಹೆಚ್ಚು !ಸ್ನೇಹದ ಲೋಕದಲಿ ಸ್ನೇಹದ ಬೆಲೆ ಎಂದಿಗೂ ಹೆಚ್ಚು

Mar 16, 2012

ಅವ್ವಳೆಂಬ ದೈವ

 • ಅವ್ವಳೆಂಬ ದೈವ

 • ಹಸಿದು ಕೂಲಿಗೆ ಹೋದ ಅವ್ವ
 • ಸೆರಗಿನಲಿ ತಿನಿಸುತಿಂಡಿಗಳ,
 • ಒಡಲ ಕೂಸಿಗೆ ಬಚ್ಚಿಟ್ಟು-
 • ಕೊಂಡದ್ದನ್ನು ಮರೆಯುವುದುಂಟೆ?

  ದುಡಿದು ಬಳಲಿ, ಸಪ್ಪೆ ಮೊಗವ
  ಮಾಡುತಾ ,ನಿದ್ದೆಯ ಲೆಕ್ಕಿಸದೆ,
  ಕೂಸನು ಮಡಿಲಲ್ಲಿ ಲಲ್ಲೆಗೈಯುವ
  ಕರುಳ ಕರುಣೆಯ ಮಮತೆ ಮಾಸುವುದುಂಟೆ?

  ಮನೆಹದ್ದಿನ ಕಣ್ತಪ್ಪಿಸಿ ಕೂಸವಿದ್ಯೆಗೆಂದು
  ಸಂಬಾರಡಬ್ಬಿಯೊಳಗೆ ಕೂಡಿಟ್ಟ
  ಪುಡಿಗಾಸಲಿ ಓದಿ ಬುದ್ಧಿಪಡೆವಾಗ,
  ನಗುವ ಅಮ್ಮನನು ದಡ್ಡಿಯನ್ನಲುಂಟೆ?

  ಕಾಲ್ತಪ್ಪಿಸುವ ನದಿಯಲಿ
  ನೀರೆದೆಯತನಕವಿದ್ದರೂ ಹೆಗಲಲಿರಿಸಿ,
  ಸಿಡಿಲಮಳೆಗಂಜದೆ ವಿದ್ಯಾಮಂದಿರದೊಳತನಕ
  ಕುಳ್ಳಿರಿಸಿ ಬರುವವ್ವನ ,ಬೆದರಿಸಿ ಗದರಿಸುವುದುಂಟೆ ?

  ಸಿಕ್ಕ ದೈವ ದೇವಸ್ಥಾನಗಳ
  ಗಂಧಲೇಪಗಳ ಹಣೆಗೆ ತಿಕ್ಕಿ,
  ತುತ್ತು ಅನ್ನಕೆ ರಾತ್ರಿ ಹಗಲೆನದ,
  ಮಮತೆ ಮೂರ್ತಿಗೆ ಮೂಢಳೆನುವುದುಂಟೇ?

  ಬೇಗೆಯೆನಿಸಿದರೆ ಹಾಳೆಯ
  ಬೀಸಣಿಗೆಯಲ್ಲಿ ಗಾಳಿಯ ಹಾಕುತ,
  ಚಳಿಯೆನಿಸಿದರೆ ಇದ್ದೊಂದ ಕಂಬಳಿಯ ಹೊದೆವ,
  ಅವ್ವಳಂತಹ ಪ್ರತ್ಯಕ್ಷ ದೈವ ಬೇರುಂಟೇ?

ಓ ಮಲ್ಲಿಗೆ, ನೀ ಮೆಲ್ಲಗೆ

ಓ ಮಲ್ಲಿಗೆ, ನೀ ಮೆಲ್ಲಗೆ
ಬಾಡುತಿರುವೆ ಯಾಕೆ..?
ನಿನ್ನ ಮುಡಿಯಲು ನನ್ನ
ರಾಣಿಯಿಲ್ಲವೆಂದು ಕೊರಗುವೆಯೇಕೆ..?
ಚಿಂತೆ ಮಾಡದಿರು ಮಲ್ಲಿಗೆ,
ನನ್ನವಳು ಬರುವಳು ತಪ್ಪದೆ
ಮುಂದಿನ ಹುಣ್ಣಿಮೆಯೊಳಗೆ..!!

ಓ ತಿಂಗಳೇ, ಬೆಳದಿಂಗಳೇ,
ನೀ ಮೋಡದ ಮರೆಯದೆಯೇಕೆ..?
ನನ್ನ ಹೃದಯದ ಪಟ್ಟದ ರಾಣಿ,
ಇರುವಳು ತವರೂರಿನಲಿ,
ಅವಳಿಗೆ ಪದೆಪದೆ ನನ್ನದೇ ಕನವರಿಕೆ.
ಮಲಗಿಸು ಅವಳನ್ನು ಹೇ ಚಂದ್ರಮ,
ನನ್ನ ಕನಸುಗಳೇಲ್ಲವನೂ ಹೊತ್ತು
ಹೊದಿಸಿ, ನೀನಾಗು ಬೆಳದಿಂಗಳ ಹೊದಿಕೆ.

ಯಾಕಾದರೂ ಬಂದಿತೋ,
ಈ ಆಷಾಡ ಮಾಸ.
ನನ್ನವಳು ಇರದ ಮನೆ,
ಈಗ ಅದಾಗಿದೆ ಕಾಲಕಸ.
ಮನ್ಮಥನ ಶಾಪವೋ ಏನೋ,
ತಾಳಲಾರೆ ನಾ ಈ ವಿರಹ.
ಕಾಯಿಸದಿರು ನಲ್ಲೆ ಇನ್ನು,
ಬೇಗ ಬಂದುಬಿಡು ಸನಿಹ.