Dec 27, 2012

ಅವಳು

ಜೀವನಚಕ್ರದಲಿ ಬೇಟ್ಟಿಯಾದ ಮತ್ತೊಂದು ಪತಂಗ ಅವಳಾಗಿತ್ತು... ಚಿಕ್ಕವಯಸು ತುಂಬಾ ಅರಿವು.. ಅಚರಿ ಮೂಡಿಸುವಂತಾ ಬಾವನೆಗಳ ಬಂಡಾರವನ್ನೆ ಕೂಡಿಟ್ಟಿದ್ದಳು... ಸಾದರಣ ಹಳ್ಳಿಯಲೆ ಬೆಳೆದು ಬಂದವಳು.. ಆಡಂಬರದ ಜೀವನ ನಡೆಸಿದವಳಲ್ಲ... ಒಂದು ತರ ಹಳ್ಳಿ ಮುಗ್ದತೆ ಅವಳಲಿತ್ತು..
ನಾನು ತುಂಬಾ ವಿಶಯಗಳನ್ನು ಅವಳಿಂದ ಕಲಿತೆ.. ವಯಸಿನಲಿ ತುಂಬಾ ಚಿಕ್ಕವಳು.. ಜೀವನದನುಬವದಲಿ ಅವಳು ತುಂಬಾ ದೊಡ್ಡವಳು... ..ಹಾ ಇದೆಲ್ಲಾ ನಾನು ಎಕೆ ಇಲ್ಲಿ ವಿವರಿಸುವುದು ಅಲ್ಲವೆ? .. ನನಗನಿಸಿಧನ್ನು ಬರೆದೆ.. ಅವಳನ್ನೆ ಆದಾರವಾಗಿ ಒಂದು ಕಾದಂಬರಿಯನು ಬರೆದೆ... ಆದರೆ ಅದನ್ನು ಅವಳು ಒದುವ ಮನಸು ಮಾಡಿಲ್ಲ .. ಇನ್ನಾದರೂ ಅವಳು ನನ್ನ ಮಾತನ್ನು ಕೆಳುವಳೊ ಎಂದು ತಿಳಿಯಧು

ಒಮ್ಮೆ ನಾನು ಅವಳೊಂದಿಗೆ ಸಂಜೆಯಲಿ ನಡೆಯುತ್ತಿರುವಾಗ ಎಧುರಿಗೆ ಬರುವವರನೆಲ್ಲ ಮಾತನಡಿಸುತ್ತಾ ಬರುತ್ತಿದ್ದಳು.. ನನಗೆ ಇರಿಸುಮುರಿಸಾಗುತ್ತಿತ್ತು .. ಇವಳೆಕೆ ಎಲ್ಲರನ್ನು ಮಾತನಾಡಿಸುತ್ತಾಳೆ ಎಂದು.. ಆಮೆಲೆ ತಿಳಿಯಿತು ಅದು ಅವಳು ಬೆಳೆದು ಬಂದ ವಾತವರಣದ ಪ್ರಬಾವ ಎಂದು...

ವಿಶಯಗಳನ್ನು ಸೊಕ್ಶ್ಮವಾಗಿ ಗಮನಿಸಿ ಅದಕೊಂದು ಪರಿಹಾರವನ್ನು ಅವಳು ನೀಡುತಿದ್ದಳು..ಯಾವುದೆ ವಿಶಯವನ್ನು ಕೂಲಂಕಶವಾಗಿ ವಿಚಾರಿಸದೆ ಅವಳೊಂದು ನಿರ್ದಾರ ತೆಗೆದು ಕೊಳ್ಳುತ್ತಿರಲಿಲ್ಲಾ.. ಅದು ನನಗೆ ತುಂಬಾ ಪ್ರಬಾವ ಬೀರಿತ್ತು...

ನಾನು ಯಾಕೆ ಹೀಗಿಲ್ಲಾ ಎಂದು ಚಿಂತಿಸಿದ್ದು ಉಂಟು

ಹುಮ್ ಅವಳು ನನಗೆ ಕೆಲವೊಮ್ಮೆ ತಾಯಿ, ಇನ್ನೊಮ್ಮೆ ಪ್ರೀತಿಯ ಅಕ್ಕ ಮತ್ತೆ ಕೆಲವೊಮ್ಮೆ ನನ್ನ ಮುದ್ದಿನ ತಂಗಿಯಾಗಿರುತ್ತಿದ್ದಳು. ನನ್ನ ಮತ್ತು ಅವಳ ಸ್ವಬಾವ ತದ್ವಿರುದ್ದವಿದೆ, ಆದರೆ ನನ್ನ ಮತ್ತು ಅವಳ mind reading. ಒಂದೆ ಆಗಿತ್ತು.
ನಾನು ಎಸ್ಟೆ ಚನ್ನಾಗಿ ಬರೆದು ಅವಳ ಹತ್ತಿರ ಕುಳಿತು ಒದಿ ಕೆಳಿಸಿದರೆ, ( ಒದುವ ಮನಸನ್ನು ಅವಳು ಇನ್ನೊ ತೊರಿಸಿಯೆ ಇಲ್ಲ) ನನ್ನ ಮುಕ ನೊಡಿ ನಗುತ್ತಾನೆ ಇರುವಳು, ನಾನು ಕುಶಿಯಲೆ, ಒದುವುದರಲೆ ತಲ್ಲೀನಳಾಗಿ, ಅವಳ ಕಡೆ ನೊಡಿದರೆ ಅವಳು ತಲೆಯಾಡಿಸುತ್ತಾ ಕುಳಿತ್ತಿದ್ದಳು. ನನಗೆ ಕುಶಿ ಮತ್ತೆ ಆಶ್ಚರ್ಯ ಒಟ್ಟಿಗೆ, ನನ್ನ ಕವಿತೆಗಳಿಗೆ ಇವಳು ತಲೆತೂಗುತಿದ್ದಳಾ ಎಂದು, ನೊಡಿದರೆ ಗೊತ್ತಾಯಿಥು ಅವಳು, ಕಿವಿಗೆ..... ಇಟ್ಟು.. ಹಾಡನ್ನು ಕೆಳುತ್ತಾ ಕುಳಿತಿದ್ದಾಳೆ ಎಂದು.

ನನಗೆ ಯಾವುದೆ ನಂಬಿಕೆ ಇಲ್ಲ ಅವಳು ಇದನ್ನು ಪೂರ್ನವಾಗಿ ಒದುವಳು ಎಂದು..ಆದರೂ " ಹೆ ! ಹುಡುಗಿ, ನೀನು ಯಾವತ್ತಾದರು ಒಣ್ದು ದಿನವಾದರು ನಿನ್ನ ಡಯರಿಯ ಪುಟಗಳನ್ನು ತಿರುಗಿಸುವಾಗ ನನ್ನ ಬ್ಲಾಗ್ಸ್ ಸ್ಪೊಟ್ ನ ಹೆಸರು ನಿನಗೆ ತಿಳಿದೆ ತಿಳಿವುದು ಎಂದು, ಆವಾಗಲು ನೀನು ನನ್ನ ಈ ಬ್ಲಾಗ್ ಅನ್ನು ಒದರೆ ಹೊದರೆ, ಮುಂದಿನ ಜನುಮದಲ್ಲಿ ಮತ್ತೆ ಬಂದು ನಿನ್ನ ಕಾಡುವೆ"...

ಹಹಹ್ ಅವಳಿಗೆ ಬೂತಗಳ ಮೇಲೆ ಸ್ವಲ್ಪ ಬಯವಿದೆ, ಅದಿಕ್ಕೆ ಅವಳು ಕಣ್ಣಡಿಯನ್ನು ನೊಡಲು ಬಯ ಪಡುವಳು. (ಆವಳನ್ನು ರೆಗಿಸಲು. ಅವಳು ತುಂಬಾ ಸುಂದರಿಯಾಗಿದ್ದಾಳೆ), ಕೊನೆಗೆ ನನ್ನ ಈ ಬೆದರಿಕೆಗೆಯಾದರು ಅವಳು, ಒದಬಹುದು.

ಎರಡು ಸಲ ನಾನು ಅವಳನ್ನು ಬಿಟ್ತು ದೂರ ಹೊಗಿದ್ದೆ, ಇನ್ನು ಅವಳ ಜೊತೆ ಮೊದಲಿನ ಹಾಗೆ ಇರುವುದು ಕನಸಿನ ಮಾತಿರಬಹುದು. ಯಾಕೆಂದರೆ, ಇವಾಗ "ನಾನೊಂದು ತೀರ , ಅವಳೊಂದು ತೀರ" ನನ್ನ ವ್ಯಕ್ತಿತ್ವವನ್ನೆ ಬದಲಾಯಿಸಿದವಳು ಅವಳು. ಆದರೆ ಅವಳು ಯಾವತ್ತು ಕೂಡ ನನಗೆ ಬುದ್ದಿ ಹೆಳಿಲ್ಲಾ. ನಾನು ಮಾಡಿದ್ದು ತಪ್ಪು ಅಂತಾನು ಹೆಳಿಲ್ಲಾ... ಮಾತಿನಿಂದ ಅವಳು ನನ್ನ ತಿದ್ದಿಲ್ಲ.. ವರ್ತನೆಯಿಂದ ತಿದ್ದಿದಳು..

ಆದರೆ, ನಾನು ಅವಳ ಜೊತೆ ಕಾರಣವಿಲ್ಲದೆ ಮೂರು ದಿನ ಮಾತು ಬಿಟ್ಟೆ... ಆ ದಿನಗಳ ಬಗ್ಗೆ ನಾವು ಮತ್ತೆ ಕೂತು ಮಾತನಾಡಿದೆವೆ, ಆವತ್ತು ನಮಗೆ ಮೊದಲು ಅಳು, ಆಮೆಲೆ ನಗು.. ನಾವು ಯಾಕೆ ಈ ತರ ಮಾಡಿದ್ದು ಎಂದು... ನಮಗೆ ಕೊನೆಗೂ ಗೊತ್ತ್ತಾಗಲೆ ಇಲ್ಲಾ.. ನಮ್ಮ ಆ ಒಣ ಮುನಿಸಿಗೆ ಕಾರಣ ಎನು ಎಂದು.. ಆ ಮೂರು ದಿನಗಳಲಿ.. ನಾವಿಬ್ಬರು ತುಂಬಾ ಚಟಪಡಿಸಿದೆವು.... ಒಬ್ಬರ ಮುಕ ನೊಡಿಯು ನೊಡದವರ ತರ ಇರುವವರ ಕಶ್ಟ .. ನಮಗೆ ಆವತ್ತು ಅರ್ತವಾಯಿಥು (ಅತ್ತೆ -ಸೊಸೆ)...ಅದಕ್ಕೆ ನಾವು ತೀರಮಿಸಿದೆವು,.." ಅತ್ತೆ ಸೊಸೆ ಜಗಳ ತುಂಬಾ ಬೊರ್ ಇರಬಹುದು ಎಂದು"...

ಅವಳನ್ನು ನಾನು ನೋಡದೆ ೯ ತಿಂಗಳುಗಳು ಆಗಿದೆ...

I Mis you Tinkuu

No comments:

Post a Comment