Aug 12, 2014

ಮೆಲುಕು



ನನ್ನ ಇನಿಯ


ಕನಸಿನ ಕಿಂಡಿಯನು ತೆರೆದರೆ
ಕಾಣಿಸುವುದು ನಿನ್ನದೆ ಮುಖ
ಮನಸಿನ ಚಿಪ್ಪಿಯನು ತೆರೆದರೊ
ಕಾಣಿಸುವುದು ನಿನ್ನದೆ ಬಿಂಬ...
ಓ ಗೆಳೆಯಾ.. ನೀ ಎನ್ನಲಿ ಬೆರೆತಿರುವೆ..
ಉಸಿರುಸಿರಲಿ ನೀನಡಗಿರುವೆ..









ಪ್ರೀತಿಗೆ ನಮನ

ಪ್ರೀತಿಸಿದ ಪ್ರೀತಿಯಿಂದು
ಮುಳ್ಳಾಗಲು...
ಕಂಡಕನಸುಗಳು.. ಬರಡಾಗಲು
ಅರಳಿದ ಆಸೆಗಳು ಬಾಡಲು
ಓ ಪ್ರೀ ನಿನಗೆ ಕೊಟಿ ನಮನ
ಕಾಣಿಸದಿರು ನೀ ಇನ್ನೊಮ್ಮೆ ಎನಗೆ

ನಿನ್ನವಳು



ನಿನ್ನ ನಂದನವ್ರಂದಾವನದಲಿ
ಅರಳಿದ ಪಾರಿಜಾತದ ಹೂವೊಂದು
ಮೆಲ್ಲನೆ ಪಿಸುಗುಡುತಿದೆ ಕಿವಿಯಲಿ
ನನಗಾಗಿ ನೀ ಕಾದಿರುವೆಯೆಂದು..

ವಿರಹ


ಮಂಜುದುರೊ ಈ ರಾತ್ರಿಯಲಿ
ಬೆಳದಿಂಗಳೆ ನೀ ಮಾತಡುವೆಯಾ
ನನ್ನಿನಿಯ ಬರುವ ತನಕ
ಕೆಳುವೆಯಾ ನೀ ಎನ್ನ ವಿರಹದ ವೇದನೆಯಾ

ಮಾತು

ಮಾತುಗಳು ಮೌನವಾಗಲು
ಮನಸುಗಳು ಮಾತನಾಡುತ್ತದೆ
ಮನಸುಗಳು ಮೌನವಾಗಲು
ಕಣ್ಣುಗಳು ಮಾತನಾಡುತ್ತದೆ
ಕಣ್ಣುಗಳು ಮೌನವಾಗಲು
ಕಣ್ಣೇರು ಮಾತನಾಡುತ್ತದೆ

ಕಣ್ಣೇರು


ಸಾದನೆಯ ಉತ್ತುಂಗದಲಿರುವಾಗ
ಹೊಗಳಿಕೆಯ , ಅಬಿನಂದನೆಗಳ
ಶಿಕರದಲ್ಲಿರುವಾಗ.. ಮನಸಿನಲಿ
ದಾಟಿ ಬಂದ ದಾರಿಯನ್ನು ನೆನೆಸುವಾಗ
ಕಂಗಳಲಿ ಜಿನುಗುವ ನೀರು..

ನಂಬಿದ ಪ್ರೀತಿ ಮುಳ್ಳಾಗಲು
ಕಟ್ಟಿಕೊಂಡ ಕನಸುಗಳು ನುಚ್ಚಾಗಲು
ನಡೆವ ದಾರಿಯು ಎಕಾಂತವಾಗಿರಲು
ಮನಸಿನ ನೊವನ್ನು ಹೊರಗೆಳೆಯೊ ದಾರಿ ..ಕಣ್ಣೀರು







ಕರಗುವ ಕನಸಿನಲಿ
ಅರಳುತಿದೆ ಕಾವ್ಯವೊಂದು
ಮಿಡಿಯುತಿರುವ ಮನದಲಿ
ಬಿರಿಯುತಿದೆ ಪ್ರೀತಿಯ ಹೂವೊಂದು
ಉದುರುತಿರುವ ಹನಿಗಳಲಿ
ಅರಳುತಿದೆ ಕಾವ್ಯವೊಂದು


ಸಾಗರದಾಚೆಯ ಲೊಕದಲಿ
ಕುಳಿತಿರುವೆಯೇಕೆ ನೀ ಗೆಳೆಯಾ
ಬಾರದೆ ನೀ ಒಮ್ಮೆ ಇಲ್ಲಿಗೆ
ಕರೆದೊಯ್ಯುವೆಯಾ ನೀ ಆ ಲೊಕಕ್ಕೆ

ಹಾಡಲೆ ನಿನ್ನ ರಾಗಕ್ಕೆ ದ್ವನಿಯಾಗಿ
ನಡೆಯಲೆ ನಿನ್ನ ಹೆಜ್ಜೆಗೆ ಜೊತೆಯಾಗಿ
ಮಿಡಿಸಲೆ ನಿನ್ನ ಬಾವನೆಗಳಿಗೆ ವೀಣೆಯನು
ಹಿಡಿಯಲೆ ನಿನ್ನ ದಾರಿಯಲಿ ಕೊಡೆಯನು ನೆರಳಾಗಿ


Aug 11, 2014

ಮೌನದಲೇ

ಮಾತಿನಲಿ ಏನೆಂದು ಹೇಳಲಿ ನಾ ಅರಿವಾಗುತಿಲ್ಲ
ಬರೆಯಲೆಂದು ಕೊಂಡರೆ ಪದಗಳು ನೆನಪಾಗುತ್ತಿಲ್ಲ
ಮಾತಿಗಿಂತ ಕೆಲವೊಮ್ಮೆ ಕಣ್ಣೀರೆ ಜೋರು ಶಬ್ದ ಮಾಡುತ್ತದೆಯಲ್ಲ
ನುಡಿದ ಪದಕಿಂತ ಮೌನದಲೇ ಸಾಕಷ್ಟು ಭಾವನೆಗಲಿರುತ್ತದೆಯಲ್ಲ !

ಬದುಕು ಹೀಗೆಯೇ ಕೆಲವೊಮ್ಮೆ ಅಚ್ಚರಿಯ ಜೊತೆಯಲಿ
ಸುಖ ದುಃಖ ನಡುವೆ ಜೀವನವು ಸಾಗಲಿ
ನೆನೆಯಲಿ ಮನ ನಿಮ್ಮ ಸ್ನೇಹದ ಮಳೆಯಲಿ
ಜೇನ ಮಳೆಯೇ ಸುರಿಯಲಿ ನಮ್ಮ ಜೊತೆಯಲಿ

ಅದ್ಯಾವುದೋ ಕಾಣದ ಬಂಧನ ನಮ್ಮಿಬ್ಬರನು ಬೆಸಿದಿದೆ
ಎಲ್ಲಿಯೋ ಹೇಗೋ ಇದ್ದ ನಮ್ಮನು ಬಂಧಿಸಿದೆ
ಸ್ನೇಹದ ಹೊಳೆಯಲಿ ನಮ್ಮನು ತೇಲಿಸುತಿದೆ
ಹೀಗೆಯೇ ಇರಲಿ ನಿರ್ಮಲ ಸ್ನೇಹ ಎಂದು ಮನ ಬಯಸುತಿದೆ

ಒಲವಿನಲಿ ಒಡಕನು ಹುಡುಕಬಹುದು ಆದರೆ ಸ್ನೇಹದಲಿ ?
ನನ್ನ ಪ್ರಶ್ನೆಗೆ ಉತ್ತರವಿದೆಯೋ ಏನೋ ನಾ ಹೇಗೆ ಅರಿಯಲಿ

Feb 13, 2014

ಗೆಳತೀ ನೀ ಬೇಗ ಬಾ...

ಬಾ ನನ್ನ ಜೀವದರಸಿ
ಕಟ್ಟೊಣ ನಮಗೊಂದು
ಪ್ರೀತಿಯ ಗುಬ್ಬಚ್ಚಿ ಗೂಡು
ಬೆಳೆಸೋಣ ನಮ್ಮ ಪ್ರೀತಿಯ
ಕುಡಿಗಳನ್ನು ...

ಕೂಡಿಟ್ಟ ಕನಸೆಂಬ ಹುಲ್ಲು
ಕಡ್ಡಿಗಳಿಂದ ಕಟ್ಟೊಣ ಮುದ್ದಾದ
ಪ್ರೀತಿಯ ಗೂಡನು.. ಎಕಾಂತದಲಿ

ಉಣಿಸೊಣ ಪ್ರೀತಿಯ ಹನಿಗಳನು
ಕಲಿಸೊಣ ಜೀವನದ ಪಾಟಗಳನು
ಕಲಿಯೊಣ ಪ್ರೆಮದ ರಾಗಗಳನು

ಗೆಳತೀ ನೀ ಬೇಗ ಬಾ...