Jan 26, 2015

ನನ್ನ ನಲ್ಲನಾಗಲು ಒಲ್ಲದವನಿಗೆ ////
ಏನೆಲ್ಲಾ ಆಸೆಗಳು ಮನದೊಳಗೆ ತುಂಬಿ
ಜೇನಿನಂತ ನುಡಿಯ ನುಡಿದು ಎನ್ನ ಹೃದಯದಲಿ
ಮನೆ ಮಾಡಿ ನನ್ನ ನಿದಿರೆಯ ಕದಿಯುತಿದ್ದ
ನನ್ನ ಹುಡುಗ ನೀನೆಲ್ಲಿ ಮರೆಯಾದೆ !
ಮಾತು ಮಾತಿಗೂ ನನ್ನ ಜೀವನ ನೀನೆಂದು
ನನ್ನ ಬಾಳ ಬೆಳಗುವ ಜ್ಯೋತಿ ನೀನೆಂದು
ನನ್ನ ಹೊಗಳಿ ಹೊಗಳಿ ಹೊನ್ನ ಶೂಲಕ್ಕೆರಿಸುತಿದ್ದ
ನನ್ನ ನೀಲಿ ಕಂಗಳ ಮುದ್ದು ಹುಡುಗ ! ನೀನೆಲ್ಲಿ ಮರೆಯಾದೆ !
ನಿನ್ನ ಸ್ಪರ್ಶಕೆ ಕಾದು ಕಾತರಿಸುತಿದ್ದ ನನ್ನ ಮನ
ನಿನ್ನಿಂದ ಏಕೆ ಹೀಗೆ ದೂರ ಹೋದರೆ ಸಾಕೆಂದು ಕಾತರಿಸುತಿದೆ
ನಿನ್ನ ಕಂಡೊಡನೆ ಕುಣಿಯುತಿದ್ದ ನನ್ನ ಮನಸು
ನಿನ್ನ ನೆರಳ ಕಂಡರೂ ಹೀಗೇಕೆ ಸಿಡಿ ಮಿಡಿ ಗೋಳ್ಳುತಿದೆ
ಬುದ್ದಿವಂತ ಹುಡುಗರು ನೀವು ! ಪ್ರೀತಿಯಲಿ ನೊಂದರೆ ಸಾಕು
ಗೂಬೆಯ ನಮ್ಮ ಮೇಲೆ ಕೂರಿಸಿ ನೀವು ಪಲಾಯನವಾಗುವಿರಿ
ಪ್ರೀತಿಯ ಹುಡುಗ ಮೋಸದ ಹುಡುಗಿ ಎಂದೆಲ್ಲ ಬರೆದು ಕೊಂಡು
ನಮ್ಮಿಂದಲೇ ನಿಮ್ಮ ಜೀವನ ಹಾಳಾಯಿತೆಂದು
ಶಪಿಸಿ ಕುಡಿದು ನೋವ ಮರೆಯುತಿದ್ದೇವೆ ಎಂದು ಕತೆಯನು ಹೇಳುವಿರಿ !

ನೀವು ಹೇಳಿದಂತೆ ಕೇಳಿದರೆ ನಾವೆಲ್ಲಾ ನಿಮ್ಮ ಕನಸಿನ ರಾಜಕುಮಾರಿಯರು
ಇಲ್ಲದೆ ಹೋದರೆ ಸುಮ್ಮನೆ ಸಮಯ ಕಳೆಯಲು ಪ್ರೀತಿಸುವ ಹುಡುಗಿಯರು
ಏನೆಲ್ಲಾ ನಮ್ಮಿಂದ ಬಯಸುವ ನನ್ನ ಮುದ್ದಿನ ಹುಡುಗ
ನೀನೇಕೆ ನನ್ನಿಂದ ಪರಿಶುದ್ದ ಪ್ರೇಮ ಬಯಸುವುದಿಲ್ಲ
ಎಲ್ಲದಕ್ಕೂ ಒಂದು ಮಿತಿಯಿದೆ ಎಂದು ಅರಿಯುವುದಿಲ್ಲ

ಗೆಳತಿಗೊಂದು ಕಿವಿ ಮಾತು .

ನನ್ನ ಪ್ರೀತಿಯ ಗೆಳತಿಗೊಂದು ಕಿವಿ ಮಾತು .
ಗೆಳತೀ ನಿನ್ನ ಮನಸ್ಸು ಸಕ್ಕರೆ ,
ಅದಕ್ಕೇ ನೋಡು, ನಿನ್ನ ಸುತ್ತ ಗೆಳತಿಯರು ತುಂಬಿಹರು
ಇರುವೆಯ ಹಾಗೆ .
ನಿನ್ನನ್ನೇ ತಿನ್ನುವ ಹಾಗೆ ಅಕ್ಕರೆಯ ಮುತ್ತು ಕೊಟ್ಟು
ಅಪ್ಪಿಕೊಂಡಿಹರಲ್ಲಾ !
ಅಬ್ಭಾ ಅವರಿಗೆ ಯಾಕಿಷ್ಟು ಪ್ರೀತಿ ಗೆಳತಿ ನಿನ್ನ ಮೇಲೆ ?
ಹೊಟ್ಟೆಕಿಚ್ಚಿನ ಹುಡುಗ ನಾನಾಗುತ್ತಿರುವೆ .
ಯಾಕೆಂದು ಹೇಳಲೇ ?
ಒಮ್ಮೆಯೂ ನೀನೇಕೆ ಮುನಿದು ಕೊಳ್ಳುತಿಲ್ಲಾ ನನ್ನ ಮೇಲೆ ?
ನೋಡಬಯಸಿರುವೆ ಗೆಳತಿ ನಿನ್ನ ಕೋಪ ,
ನನಗಾಗಿ ಮುನಿದುಕೊಳ್ಳುವೆಯಾ ನನ್ನ ಮೇಲೆ ?
ನಿನ್ನ ಕೋಪವೂ ಸಕ್ಕರೆ ನನ್ನ ಪಾಲಿಗೆ

ಗೆಳತೀ
ಗೆಳತೀ ಎಲ್ಲಿ ಮರೆಯಾದೆ ನೀ...
ನೊವ ಕೊಡಲೆಂದೆ.. ಬಂದೆಯಾ

ಕಾಡುದಾರಿಯ ಶೂನ್ಯತೆ ತುಂಬಿದೆ
ಕಿರುದೀಪವಾಗಿ ಬಳಿಬಾರದೆ ಒಮ್ಮೆ...

ನಿನ್ನ ನಗುವಲ್ಲಿ ಮರೆತ ನನ್ನ ನೊವುಗಳು..
ನಿನ್ನ ನೆನಪಲ್ಲಿ... ಮರುಕಳಿಸುತಿದೆ...

ಮರುಬೂಮಿಯಲಿ ಕೆಳೊ...ರೊದನಂತೆ..
ಕೆಳಿಸುತಿದೆಯಾ ನನ್ನೀ ಮನದ ಗಾಯನಾ...

ಸಪ್ತವರ್ಣಗಳಲಿ ಅಚ್ಚಳಿಯದೆ..
ಬರೆದಿಡುವೆ ನನ್ನೆದೆಯಲಿ... ನಿನ್ನ ಹೆಸರನು..

ಒಡಲಲಿ ಹತ್ತಿರೂ ಪ್ರೀತಿಯ ಜ್ವಾಲೆಯನಾರಿಸಲು
ಬೊಗಸೆ ಕಣ್ಣೀರು ಸಾಲದು ಗೆಳತಿ....

ಹ್ರುದಯದ ನವಿರು ಬಾವನೆಗಳ ಗೀಚಿ
ಮಾಯಾವಾದೆ ನೀ ಮೆಲ್ಲನೆ.... ಮೆಲ್ಲನೆ...

ಹತ್ತಾರು ಕಾರಣ ಕೊಡುವೆ ನೀನುನನ್ನನ್ನು ದೂರ ತಳ್ಳಲುಒಂದೇಯೊಂದು ಭಾವನೆ ಸಾಕು ನಂಗೆನೀನು ಬೇಕೆನ್ನಲುನೂರು ಪ್ರಶ್ನೆ ಕೇಳುವೆ ನೀನುಏಕೆ ಜೊತೆ ಇರಬೇಕೆಂದುನೀನೆಲ್ಲ ಪ್ರಶ್ನೆಗಳಿಗೆಒಂದೇಯೊಂದು ಉತ್ತರ ನಂದುಸಾವಿರಾರು ನೂವು ಕೊಟ್ಟೆಹಣೆಬರಹ ಎಂದು ಹೆಸರು ಇಟ್ಟೆಆದರೂ ನಾ ನಿನ್ನಲ್ಲೇ ಮನಸನಿಟ್ಟೆನಿನ್ನೆಲ್ಲ ಮಾತಿಗೂ..ನಿನ್ನೆಲ್ಲ ಪ್ರಶ್ನೆಗೂ..ನನ್ನ ಉತ್ತರ ಒಂದೇಯೊಂದು........"ಪ್ರೀತಿಸುವೆ ನಿನ್ನನು ಎಂದೆಂದು"

ಒಲವಲ್ಲದೆ ನಿನ್ನಲ್ಲಿ

ಒಲವು ಒಲಿವ ವೇಳೆ ವಸಂತ,
ಒಲವು ಹರಿವ ವೇಳೆ ಮಳೆ....
ಒಲವು ನುಡಿವ ವೇಳೆ ಕೊಳಲು,
ಒಲವು ನಲಿವ ವೇಳೆ ಋತು....
ಒಲುಮೆಯ ಹಾಳೆಯಲ್ಲಿ
ಒಲವೇ ಮೂಡಿದೆ.
ಒಲವಲ್ಲದೆ ನಿನ್ನಲ್ಲಿ
ಕೊಡಲು ಬೇರೇನಿದೆ....?
ನೀ ಕೊಡುವ ಎಲ್ಲವೂ
ಒಲವಿಂದಲೆ ಮೂಡಿದೆ....!
ಬಚ್ಚಿಟ್ಟು ಬಾಡಿಸುವೆ ಏಕೆ....?
ಒಲವು ಅಂತರಂಗದ ಅಮೃತ
ಹರಿಯಲಿ...

ದಾಸಿಯ ಮಾಡುವೆಯಾ ನೀ ಎನ್ನಾ
ನಿನಗೆ ರಾಧೆಯ ಪ್ರೀತಿ ಇಷ್ಟಾನ ಇಲ್ಲಾ ಈ ನಿನ್ನ ದಾಸಿಯಾ ಕಂಬನಿ ಇಷ್ಟಾನಾ? ಕಾಪಲರ ಕೈಯಲಿ ಸಿಕ್ಕಿ ಕಸವಾಗಿರುವೆ ಕ್ರಷ್ಣಾ ನಂದನವನವಿಲ್ಲ, ಕೊಳಲಿಲ್ಲಾ ನವಿಲಗರಿಯಿಲ್ಲಾ ದಾಸಿಯ ಮಾಡುವೆಯಾ ನೀ ಎನ್ನಾ, ನಿನ್ನ ಪಾದದಡಿಯಲಿ ಅರಮನೆಯಿಲ್ಲ, ಅಂತಪುರವಿಲ್ಲಾ ಕಾಲ್ಗೆಜ್ಜೆಯ ಸದ್ದಿಲ್ಲ, ಕೈಬಳೆಗಳ ನಾದವಿಲ್ಲ ಹೂಮೊಗ್ಗುಗಳ ನಲಿದಾಟವಿಲ್ಲ, ಕೋಗಿಲೆಯ ಚಿಲಿಪಿಲಿಯಿಲ್ಲಾ ಕ್ರಿಷ್ಣಾ.. ಸೆರಿಸುವೆಯಾ ನಿನ್ನ ಪಾದದಡಿಯಲೆನ್ನಾ

Jan 19, 2015

ಜಾತಿ ಪದ್ದತಿಯ ಕೀಲು ಗೊಂಬೆ

ಮಾತು ಹೇಳದ ಮತ್ತೊಂದು ಬಾಷೆಯೇ ಈ ಮೌನ
ಜಾತಿ ಪದ್ದತಿಯ ಕೀಲು ಗೊಂಬೆಗಳೆ... 
ಮುರಿದು ಹೊರ ಬನ್ನಿ... ಮೋಡ ನಂಬಿಕೆಯ ಮೌಡ್ಯ ದಿಂದ .... 

ಕಾಲ ಒಡುತಿದೆ... ನೀ ಅದರ ಜೊತೆ ಓಡು... 
ಅಜ್ಞಾನದ ಪರದೆಯಲಿ ಇನ್ನೇಷ್ಟು ದಿನ ನಿನ್ನ ಆಟ
ನಗಲು ಸಾಕೆನಗೆ ನಿನ್ನೇ... ದೊಂಬರಾಟ ...

ಆ ಜಾತಿ ಮೆಲೊ... ಈ ಜಾತಿ ಮೆಲೋ.
ಗೊಂದಲವೊ... ಗೊಂದಲ... ಅದರ ಮದ್ಯೆ ನೀ
ಒಂದು ಮೂರ್ಕ ... ಏನೆನ್ನಲಿ ನಾ ನಿನಗೆ

ನಿಲ್ಲಿಸು ನಿನ್ನಾ.. ಈ ಮೋಡ ನಂಬಿಕೆಯೆನ್ನುವ
ತೂತು ಮಡಿಕೆಗೆ ನೀರು ತುಂಬುವ ಯಥ್ನ..
ಸಾಕಿನ್ನು ಎಡ್ದೆಳು.. ಪೊರೆ ಕಳಚು 

My Click-Flowersಬಯಸದೆ ಬಂದ ಭಾಗ್ಯ


ಚಿನ್ನ ನಾ ಪ್ರೀತಿಸಿದೆ ನಿನ್ನ ...
ಬಯಸದೆ ಬೇರೇನೂ ನಿನ್ನಿಂದ ...
ಬಯಸದ ನನಗೆ ನೀ ಕೊಟ್ಟ ಉಡುಗೊರೆ..
.ನೊಂದ ಹೃದಯ .......ಬರಿದಾದ ಮನ .....
ಬತ್ತಿ ಹೋದ ಭಾವನೆಗಳು ....ಕಾಡುವ ನೆನಪುಗಳು....
ಭಗ್ನ ಪ್ರೇಮಿ ಎಂಬ ಬಿರುದು .....
ಇವಿಷ್ಟು ಕೊಟ್ಟು ನೀ ಸ್ವಾಭಿಮಾನಿಯಾದೆಪಡೆದ ನಾನು..... .................. ............. ......
ಕಳೆದು ಹೋಗಿರುವೆ....
ಚಿನ್ನಾ...ಬಯಸದೆ ಬಂದ ಭಾಗ್ಯ ಅಂದರೆ ಇದೇನಾ?