Aug 11, 2014

ಮೌನದಲೇ

ಮಾತಿನಲಿ ಏನೆಂದು ಹೇಳಲಿ ನಾ ಅರಿವಾಗುತಿಲ್ಲ
ಬರೆಯಲೆಂದು ಕೊಂಡರೆ ಪದಗಳು ನೆನಪಾಗುತ್ತಿಲ್ಲ
ಮಾತಿಗಿಂತ ಕೆಲವೊಮ್ಮೆ ಕಣ್ಣೀರೆ ಜೋರು ಶಬ್ದ ಮಾಡುತ್ತದೆಯಲ್ಲ
ನುಡಿದ ಪದಕಿಂತ ಮೌನದಲೇ ಸಾಕಷ್ಟು ಭಾವನೆಗಲಿರುತ್ತದೆಯಲ್ಲ !

ಬದುಕು ಹೀಗೆಯೇ ಕೆಲವೊಮ್ಮೆ ಅಚ್ಚರಿಯ ಜೊತೆಯಲಿ
ಸುಖ ದುಃಖ ನಡುವೆ ಜೀವನವು ಸಾಗಲಿ
ನೆನೆಯಲಿ ಮನ ನಿಮ್ಮ ಸ್ನೇಹದ ಮಳೆಯಲಿ
ಜೇನ ಮಳೆಯೇ ಸುರಿಯಲಿ ನಮ್ಮ ಜೊತೆಯಲಿ

ಅದ್ಯಾವುದೋ ಕಾಣದ ಬಂಧನ ನಮ್ಮಿಬ್ಬರನು ಬೆಸಿದಿದೆ
ಎಲ್ಲಿಯೋ ಹೇಗೋ ಇದ್ದ ನಮ್ಮನು ಬಂಧಿಸಿದೆ
ಸ್ನೇಹದ ಹೊಳೆಯಲಿ ನಮ್ಮನು ತೇಲಿಸುತಿದೆ
ಹೀಗೆಯೇ ಇರಲಿ ನಿರ್ಮಲ ಸ್ನೇಹ ಎಂದು ಮನ ಬಯಸುತಿದೆ

ಒಲವಿನಲಿ ಒಡಕನು ಹುಡುಕಬಹುದು ಆದರೆ ಸ್ನೇಹದಲಿ ?
ನನ್ನ ಪ್ರಶ್ನೆಗೆ ಉತ್ತರವಿದೆಯೋ ಏನೋ ನಾ ಹೇಗೆ ಅರಿಯಲಿ

No comments:

Post a Comment