ಕಲಾವಿದನ ಕುಂಚಕದಿಯಬೇಡ ನೀ ನನ್ನ ನಿದಿರೆಯ, ಮರೆಸಬೇಡ ನನ್ನ ಹಸಿವ.
ನೊಂದ ಮನಕ್ಕೆ ಮುಳ್ಳೇರೆಯಬೇಡ, ಇಲ್ಲದಿರೊ ನೆಮ್ಮದಿಯ ನೀ ಕದಿಯಬೇಡ.
ಹೋಗು ನೆನಪೆ ನೀ ದೂರ, ಬರಿದಾದ ಮನಕ್ಕೆ ಮತ್ತೆ ತಂದೆ ನೀ ಬರ.
ಬಂದರೆ ಮನಕ್ಕೆ ಇನೆಲ್ಲಿ ಇದೆ ಉಳಿಗಾಲ.
ಅಳುತ್ತಿರುವ ಮನಕ್ಕೆ ಸವಿ ನೆನಪುಗಳು ಏಕೆ,
ನೆನೆದು ನೆನೆದು ಅಳುತ್ತಲೇ ಇರುವ ಪರಿಸ್ಥಿತಿ ಬೇಕೇ.
ಬೇಡವೆಂದು ತಳ್ಳಿದರು ದೂರ, ಮತ್ತೇಕೆ ಇಲ್ಲಸಲ್ಲದ ನೆಪವೊಡ್ಡಿ ಬರುವೆ ನೀ ಹತ್ತಿರ,
ಎಲ್ಲ ಮರೆತು ನೆಮ್ಮದಿಯ ಹುಡುಕಲು ಹೋರಟ ಮನಸಿಗೆ ಬೇಡಿಯ ಹಾಕಿ
ಮತ್ತೆ ಕರೆತಂದು ಕಣ್ಣಿರಿರಿಸುತ್ತಿರುವೆ ನೀ ನೆನಪೇ.
ಇರುವುದನೆಲ್ಲ ಹೊತ್ತು ಕೊಂಡು ಹೋದಳು ಉಸಿರೊಂದನ್ನ ಬಿಟ್ಟು ನನಗೆ,
ಇರುವುದೊಂದನ್ನ ಕದಿಯಲು ನೀನೇಕೆ ಬಂದೆ ನೆನಪೇ?ಬಿಟ್ಟೆನೆಂದರೂ ಬಿಡದ ಮಾಯೆ ! ಮರೆತೆನೆಂದರೂ ಮರೆಯಲಾಗದ ನೆನಪೇ !
ಇದ್ದೆ ನನ್ನ ಪಾಡಿಗೆ ನಾ ನನ್ನ ಜಗತ್ತಿನಲ್ಲಿ !
ನನ್ನದೇ ಆದ ಕನಸಿನ ಲೋಕದಲ್ಲಿ !
ಎಲ್ಲಿದ್ದಳೋ ಅವಳು ! ಹಾಗೆಯೆ ಮನಸಿನ ಆಳಕ್ಕೆ ಇಳಿದು ಹೋದಳು !
ಕಣ್ಣು ಬಿಟ್ಟರೂ , ಮುಚ್ಚಿದರೂ ಅವಳೇ ಕಣ್ಣ ತುಂಬ ತುಂಬಿಕೊಂಡಳು !
ಏನಂಥ ಕರೆಯಲೇ ಅವಳನ್ನ ? ಏನಂಥ ವರ್ಣಿಸಲಿ ಅವಳ ಚೆಲುವನ್ನ !?
ಅಲೆದು ಅಲೆಮಾರಿಯಗುತಿದ್ದವನ, ತಡೆದು ಗುರಿ ತೋರಿದ ಗುರು ಅವಳು !
ಕುಳಿತು ಕಾಲ ಕಳೆಯುತ್ತಿದ್ದವನ ಕರೆದು ಕನಸ ತುಂಬಿದ ಕಂಗಳು !
ಅರಿವಾಗು ವಷ್ಟರಲ್ಲೇ ಮರೆಯಾದವಳು ! ಬಿಟ್ಟೆನೆಂದರೂ ಬಿಡದ ಮಾಯೆ ! ಮರೆತೆನೆಂದರೂ ಮರೆಯಲಾಗದ ನೆನಪೇ

ಮನಸೇ ಮಾನಸ ನೀ ದುೂಡದಿರು, ಪ್ರೀತಿಸುವ ಮನಸ ನೀ ಕಳೆಯದಿರು, ಕಳೆದ ಮನಸ ನೀ ಹುಡುಕದಿರು,
ಹುಡುಕಿ ಸಿಗದೆ ಹೋದಾಗ ನೀ ಮರುಗದಿರು. ಮನಸ ಕೊಳ್ಳದಿರು, ಮಾತನಾಡದೇ ಮನವೇ ಮನಸ ನೀ ಹಿಂಸಿಸದಿರು,
ದಯಮಾಡಿ ಬಾ ಮನಸೇ, ಮನದ ಮನಸ ನೀ ಅರಿತು, ಮನಸೋಡನೆ ಮನಸಾರೆ ನೀ ನಲಿಯ್ಯುತ್ತಿರು. ನಗೂಮೊಗದ ಮನಸ ನೀ ಅ
ಪ್ರೀತಿಸೋ ಸವಿ ಹೃದಯವ ಹೊತ್ತು ಸಾಗಿದೆ ಹಸಿರ ಹೊನಲ ರಾಶಿಯಲ್ಲಿ,

ಎದುರಾದೆ ನೀ ಮುಗುಳ್ನಗೆಯ ಹೊತ್ತು ಜನಸಾಗರದಲ್ಲಿ.
ಪ್ರೀತಿಯ ನನ್ನ ಮನದಲ್ಲಿ ಬಿತ್ತು,ಅರ್ಥವಾಗದ ನಗುವ ನೀ ಹೋದೆ ಬಿಟ್ಟು,
ಹೇಳದೇ ಹೋದೆ ನಗುವಿನ ಅರ್ಥವ,ಬಿತ್ತಿದೆ ಮನದಲ್ಲಿ ಪ್ರೀತಿಯ ಬೀಜವ.
ಹುಡುಕುತ್ತಾ ಹೊರಟೆ ಆ ನಗುವ, ಮತ್ತೆ ಸಿಕ್ಕು ನೀ ನೀಡಿದೆ ಒಲವ.
ಮಾತಿಲ್ಲದೆ ಬೆರೆತವು ಪ್ರೀತಿಯ ಮನಸುಗಳು, ತಿಳಿಯದೇ ಬೇರೆಯಿತು ಕಣ್ಣ ಅಂಚಲ್ಲಿ ಪ್ರೀತಿಯು.
ಸನಿಹವಾಗಿ ಪ್ರೀತಿಯ ಅಮೃತವ ಕುಡಿದೆವು just ಮಾತ್ ಮಾತಲ್ಲಿ,
ಪ್ರೀತಿಯು ಕುಳಿತು ನಲಿಯಿತು ನಮಿಬ್ಬರ ಮನಸು ಮನಸಲ್ಲಿನಾ ಬರೆದ ಕವಿತೆಗಳ ಒಡತಿ ನೀನಾಗಿರಲಿಲ್ಲ ಗೆಳತಿ
ನೀನೆ ಆಗಿದ್ದರೆ ಏಕೆ ಮರೆಯಾಗುತ್ತಿದ್ದೆ ಆ ರೀತಿ
ಮರೆತು ನನ್ನ ನಿರ್ಮಲ ಪ್ರೀತಿ

ಕಂಡ ಕ್ಷಣ ಬರೆಯುತಿದ್ದೇ ನಿನ್ನ ಮೇಲೊಂದು ಕವನ
ಸಾವಿರ ಕನಸು ತುಂಬಿಕೊಂಡಿದ್ದವು ನನ್ನ ನಯನ
ಸಾವಿರ ಬಾರಿ ಹೇಳಿತು ನನ್ನ ಮನ
ಪ್ರೀತಿಸುತ್ತಿದ್ದಿಯ ಅವಳನ್ನ ! ನಿನ್ನ ಪ್ರೀತಿ ನೀಜವೆನಾ ?

ಕಾರಣವಿಲ್ಲದೆ ನಿನ್ನ ಅರಿತು , ನನ್ನ ನಾನೇ ಮರೆತು
ಹುಚ್ಚನಂತೆ ಅಲೆಯುತ್ತಿದ್ದೆ ! ಏನ ಹೇಳಲಿ ಆ ದಿನದ ಮಾತು
ನಿನ್ನ ಕಾಣದಾದಾಗ ಕಾಣುವ ಹಂಬಲ , ಕಂಡಾಗ ಮಾತನಾಡಿಸುವ ಕುತೂಹಲ!

ಹತ್ತಿರ ಬಂದು ನಿನ್ನ ಬಳಿ ಹೇಳದೆ ಹೋದ ಮಾತುಗಳು ಸಾವಿರ ಸಾವಿರ
ಮನ ಬಯಸುತಿತ್ತು ನೀನಿರಬೇಕು ಸದಾ ನನ್ನ ಹತ್ತಿರ
ನಾನಾಗ ಬಯಸಿದ್ದೆ ನಿನ್ನ ಭಾನಂಗಳದ ಚಂದಿರ
ಹೇಳೇ ಗೆಳತಿ ಈಗಲಾದರೂ ನಿಜ ! ನೀನೇಕೆ ಸರಿದು ಹೋದೆ ದೂರ ದೂರ !

ನಿರ್ಮಲ ಮನದಿ ನಿನ್ನ ನಾ ಬಯಸಿದ್ದೆ
ನಿನ್ನ ಮೇಲೆ ನನ್ನ ಕನಸಿನ ಅರಮನೆಯ ಕಟ್ಟಿದ್ದೆ
ಕನಸಿನರಮನೆಯ ರಾಜಕುಮಾರಿ ಎಂದು ನಾ ನಂಬಿ ಕೊಂಡಿದ್ದೆ
ನೀ ಅರಿಯದಂತೆ ನನ್ನ ದೂಡಿ ದೂರ ಹೋದಾಗ ನಾ ನನ್ನಲ್ಲೇ ನಂಬಿಕೆ ಕಳೆದು ಕೊಂಡಿದ್ದೆ !

ನಿನ್ನ ಮೇಲೆ ಬರೆದ ಕವನಗಳು , ನಿನ್ನ ಮೇಲೆ ಕಟ್ಟಿ ಕೊಂಡಿದ್ದ ಕನಸುಗಳು
ನಿನ್ನ ಕಾಣಲು ಕಾತರಿಸುತಿದ್ದ ನನ್ನ ಕಣ್ಣುಗಳು
ಮಂಜಾಗಿ ಕನಸು ಕರಗಿ ಹೋಗಿದೆ 

ನಿನ್ನೆಲ್ಲ ನೋವುಗಳ ಹಂಚಿಕೊಳ್ಳ ಬಲ್ಲ !
ನೀ ಕಂಡ ಎಲ್ಲ ಕನಸುಗಳಿಗೆ ಕಣ್ಣು ಗಳಾಗಬಲ್ಲ!
ನಿನ್ನ ಹೃದಯದ ಪ್ರತಿ ಬಡಿತವು ಆಗಬಲ್ಲ !
ನಿನ್ನೆಲ್ಲ ಕಾರ್ಯಕೆ ಸ್ಪುರ್ತಿಯಾಗಬಲ್ಲ !
ಹೊಸ ಹೊಸ ಕನಸುಗಳ ನಯನಕೆ ತುಂಬುವ !
ಹೊಸ ನೀರಿಕ್ಷೆಯಲಿ ! ಹೊಸತನವ ನೀಡುವ !
ಜಗತ್ತಿನಲಿ ! ಬೆಲೆ ಕಟ್ಟಲಾಗದ !
ಅರ್ಥದಲಿ ! ವಿವರಿಸಲಾಗದ ! ಹೊಸ ಬಂಧನ !
ನೂತನ ! ಮದುರ ಬಂಧನ !
ಕರೆಯುವರು ಅದನು "ಸ್ನೇಹ"ವೆಂದು !
ಆ ಸ್ನೇಹದ ಲೋಕದ ಸಹ ಪಯಣಿಗರು ನೀವು !
ಮಿನುಗಲಿ ! ಆ ನಕ್ಷತ್ರ ಲೋಕದಲಿ ತಾರೆಗಳಂತೆ ನಾವು !
ಏನ ಬನ್ನಿಸಲಿ ! ಏನ ವರ್ಣಿಸಲಿ ! ಸ್ನೇಹದ ಆನಂದವನ್ನು !
ಅದು ನೀಡುವ ಮದುರ ಭಾವನೆಯನ್ನು !

ಮರೆತೆನೆಂದರೂ ನಿನ್ನ ಹೇಗೆ ಮರೆಯಲಿ ಹೇಳೇ ಗೆಳತಿ
ಮರೆಯದ ನೆನೆಪು ನೀನಾದೆ ಏಕೆ ಆ ರೀತಿ

ಬರೆದ ಪ್ರತಿ ಕವನದಲ್ಲೂ ನೀನೆ ಅವಿತು ಕುಳಿತಿದ್ದೆ
ಅಕ್ಷರದೊಳಗೆ ಬೆರೆತು ನನ್ನ ಮಿಡಿತವ ಜೋರು ಮಾಡುತಿದ್ದೆ

ಈಗ ಆ ಕವನ ನನ್ನ ನೋಡಿ ಅಣಕಿಸುತಿದೆ ಗೆಳತಿ
ಎಲ್ಲಿ ಹೋಯಿತು ನಿನ್ನ ಅಮರವಾದ ಪ್ರೀತಿಯೆಂದು !

ನೀನೆ ತುಂಬಿದ್ದೆ ನನ್ನ ಹೃದಯದೊಳಗೆ
ಅರಿವಿಲ್ಲದೆ ನಿನಗೆ ! ಹೃದಯ ಚೂರು ಚೂರು ಮಾಡಿದೆ ಕೊನೆಗೆ
ನಿನ್ನ ನೆನಪಲ್ಲೇ ಸಾಗುತಿತ್ತು ನನ್ನ ಬರವಣಿಗೆ
ಅರಿವಿಲ್ಲದ ಹಾಗೆ ಮರೆಯಾಗಿ ನೀನೆಲ್ಲಿ ಹೋದೆ ! ನನ್ನ ಮಲ್ಲಿಗೆ !

ಕಣ್ಣೀರು ಸುರಿಸುತ ನಿನ್ನ ನೆನಪಲಿ ನಾ ಕೊರಗುವುದಿಲ್ಲ
ನಿನ್ನ ಪ್ರೀತಿಸಿದ ತಪ್ಪಿಗೆ ನಾ ಪಶ್ಚಾತ್ತಾಪ ಕೂಡ ಪಡುವುದಿಲ್ಲ !


ಗೊತ್ತಿದೆ ನನಗೆ ನನ್ನ ಪ್ರೀತಿ ನಿರ್ಮಲವಾಗಿತ್ತೆಂದು
ಅರಿವಿದೆ ನನಗೆ ಈ ಭೂಮಿ ತುಂಬ ಚಿಕ್ಕದೆಂದು
ನಿನ್ನ ಹಾಗೆ ಎಲ್ಲೋ ಯಾರೋ ನನಗಾಗಿ ಕಾಯುತಿರುವರಿಂದು
ಅವರಿಂದ ನಾ ಖುಷಿಯಲಿ ತೇಲುತಿರುವೆ ಸಂಭ್ರಮದಿ ಮಿಂದು !

ಯಾರೋ ಗೀಚಿ ಹೋದ ಹಾಳು ಹಣೆಯ ಬರಹವೆಂದು ಕುಳಿತು ಕೊಂಡಿಲ್ಲ ನಾನು !
ಹಣೆಯ ಬರಹವ ಬದಲಾಯಿಸಿ ಬರೆಯಲು ಸಾದ್ಯವಿಲ್ಲವೇನು ?
ಯಾರ ನೆನಪಲಿ ನಾ ಕೊರಗಿದರೆ ಅದರಿಂದ ಪ್ರಯೋಜನವೇನು
ಕಡೆಗೆ ವಿಧಿ ಬರೆದ ಹಾಗೆ ನಮ್ಮೆಲ್ಲ ಜೀವನ ಸಾಗುವುದಿಲ್ಲವೇನು ಮನಸಿನಲಿ ಮೊದಲು ಚಿತ್ರಿಸಿದ ಚಿತ್ರವದು ನಿಂದೇನಾ?
ಮನ ಹಗಲಿರುಳು ಕನವರಿಸುತ್ತಿದ್ದಿದ್ದು ನಿನ್ನ ಬರುವಿಕೆಗೇನಾ?
ಅರಿಯದ ಅರ್ಥವ ಅರಿಯಲು ಹೆಣಗಿದ್ದು ಅದು ನಿನ್ನಿಂದನೆನಾ!
ಮನದ ನಲಿವಿಗೆ ಕಾರಣವಾಗಿದ್ದು ನಿಮ್ಮ ಸ್ನೇಹವೇನಾ ?

ಅರಿಯಲಾಗುತಿಲ್ಲ ಏನಾಗಿದೆ ಮನಕೆ ಇಂದು !
ಖುಷಿಯೊಳಗೆ ಕುಣಿಯುತಿದೆ ನಿಮ್ಮ ಸ್ನೇಹದಲಿ ಮಿಂದು
ಮತ್ತೆಂದು ಬರುವುದೋ ಖುಷಿಯ ಘಳಿಗೆ ಎಂದೋ !
ಆ ದಿನದ ನೆನಪಿನಲೆ ಸಾಗುತಿದೆ ಜೀವನವಿಂದೂ !

ಹರುಷದ ಹೊನಲಿನಲಿ ಮನ ತೇಲಿದೆ
ಕಾಣದ ಆನಂದದ ಅನುಭವವನ್ನು ಅನುಭವಿಸಿದೆ
ನಿಜವಾಗಿಯು ಅರಿವಾಗಿದೆ ಸ್ನೇಹದಲಿ ಎಂತಹ ಸುಖವಿದೆ
ಪ್ರೀತಿಗಿಂತ ಮಧುರ ಬಂಧನ ಸ್ನೇಹದಲ್ಲಿದೆ !
ಅರಿತು ನಡೆದರೆ ಅದರ ಮುಂದೆ ಮತ್ಯಾವ ಬಂಧವಿದೆ !

ಎರಡೂ ಮಧುರ ಹೃದಯಗಳ ನಡುವಿನ ಸಮ್ಮಿಲನ ಈ ಸ್ನೇಹ
ಮನ ಕಾಣದ ಹಿತವೆನ್ನುವ ಅನುಭವ ಈ ಸ್ನೇಹ
ಸುಂದರ ಹಸಿರನುಟ್ಟು ನಲಿವ ಪ್ರಕೃತಿ ಈ ಸ್ನೇಹ
ಸುಂದರ ನಿರ್ಮಲ ಮಧುರ ಬಂಧನ ಈ ಸ್ನೇಹ 

ನಗುವವರ, ನಗಿಸುವವರ ಮನಸಿನಲಿ ಎಷ್ಟೋ ದುಖವಿರುತ್ತೆ !
ಕಣ್ಣಿಲ್ಲದವರಲ್ಲೂ ಕೂಡ ಸಾವಿರ ಕನಸಿರುತ್ತೆ !
ಎಲ್ಲ ಕೆಟ್ಟ ಘಳಿಗೆಗೂ ಕೂಡ ಒಂದು ಅಂತ್ಯ ಇರುತ್ತೆ !
ಎಲ್ಲದಕ್ಕೂ ಕೂಡ ಹಸ್ತ ರೇಖೆ ನೋಡ್ತಿವಿ ನಾವು !
ಆದ್ರೆ ಕೈ ಇಲ್ದ್ರೆ ಇರೋರಿಗೆ ಕೂಡ ಸುಂದರ ಭವಿಷ್ಯವಿರುತ್ತೆ ! ಮರಿಬಾರ್ದು ನಾವು !
ನೋವು ಉಂಡವರು ಅಂದ್ಕೊತಿವಿ ನಾವು ! ಬೇಲಿಯ ಹೂವು !
ಆದ್ರೆ ತಿಳ್ಕೊಲೋದಿಲ್ಲ ಜನ ! ಅದರಲಿ ಇರೋ ನೋವು !
ಯಾರನ್ನೋ ನಂಬ್ತಿವಿ ! ಇನ್ನ್ಯಾರನ್ನೋ ಪ್ರೀತಿಸ್ತಿವಿ !
ನಂಬಿಕೆ ಅನ್ನೋದನ್ನ ನಾವು ನಂಬ್ತಿವಿ !
ಅದನ್ನ ಉಳಿಸಿಕೊಳ್ಳೋಕೆ ಸುಮ್ಮನೆ ಪ್ರಯತ್ನ ಮಾಡ್ತಿವಿ !
ಆದ್ರೆ ನಮಗೆ ಅರಿವಾಗದೆ ಇರೋದು ಒಂದು ಮಾತು ಸತ್ಯ
ಪ್ರೀತಿ ಮಾಯೇಯಂತ ಗೊತ್ತು ! ಅದರೂ ಬಿಳ್ತಾನೆ ಇರ್ತಿವಿ ನಿತ್ಯ !
ನಿಜ ಹೇಳ್ಬೇಕು ಅಂದ್ರೆ ! ಪ್ರೀತಿಗಿಂತ ಬೇರೆ ಲೋಕ ಒಂದಿದೆ
ಪ್ರೇಮಿಗಿಂತ ಇನ್ನು ಹೆಚ್ಚು ಬಂದ ಇರೋ ! ಅನುಬಂಧನ ಇದೆ !
ಒಪ್ಪಿಕೊಂಡರೆ ! ನೀವು ! ನಾವು ! ಹೊಸ ಲೋಕ
ನಂಬಿಕೆಯ ಉಳಿಸಿಕೊಂಡು ಕಟ್ಟೋಣ ಸ್ನೇಹದ ಲೋಕ ಬದುಕ ನಡೆಸಲು ಆಡಬೇಕು ನೂರಾರು ಆಟ !
ಬದುಕು ಎಂಬುದು ಮಾಯೆಯ ಆಟ !
ನೂರಾರು ಪ್ರಶ್ನೆಗಳು , ಕೆಲವಕ್ಕೆ ಮಾತ್ರ ಉತ್ತರ !
ನೂರಾರು ಮನಸುಗಳು , ಕೆಲವಕ್ಕೆ ಮಾತ್ರ ಪ್ರೀತಿ !
ಎಷ್ಟೋ ಕನಸುಗಳು ಹೇಳಲು ಮನಕೆ ಬೀತಿ !
ಹೇಳಲು ಆಗುವುದಿಲ್ಲ ಕೆಲವೊಂದು ನುಡಿ !
ಬದುಕ ಕರೆದ ಕಡೆ ಬಂಡಿಯ ಬಿಡಿ !
ಸ್ವಾರ್ಥದಲಿ ಪ್ರೀತಿಯ ಬದುಕು ಅರಳುವುದಿಲ್ಲ !
ಪ್ರೀತಿಸಿದ ಎಲ್ಲರಿಗು ಪ್ರೀತಿ ದೊರೆಯುವುದಿಲ್ಲ !
ಮನ ಕಂಡ ಕನಸು ನನಸಾಗಲು ಹಾತೊರೆಯುತ್ತದೆಯಲ್ಲ !
ಬರೆದ ಎಲ್ಲ ನುಡಿಗಳು ಕವನಗಳಾಗುವುದಿಲ್ಲ !
ನಾ ಬರೆದ ನುಡಿಗಳಲಿ ಅರ್ಥವಿರುವೊದೋ ಗೊತ್ತಿಲ್ಲ !
ಕಾಣದ ಬದುಕಿನ ಹಿಂದೆ ಬಿದ್ದಿರುವುದು ಸುಳ್ಳಲ್ಲ !
ನಂಬಿಕೆಯಿದೆ ! ಅಮಾವಾಸೆಯಲಿ ಕಾಣದೆ ಹೋದರು ಚಂದಿರ !
ಬಾಳ ಇರುಳಿನಲಿ ತಂಪೆರೆಯಲು ಮತ್ತೆ ಬರುವನು ಚಂದಿರ